fbpx
ಸಮಾಚಾರ

ಮತ್ತೆ ಕನ್ನಡ ಚಿತ್ರದಲ್ಲಿ ನಟಿಸಿದ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ.

ದಕ್ಷಿಣ ಚಿತ್ರರಂಗದ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಮತ್ತೊಮ್ಮೆ ಕನ್ನಡಕ್ಕೆ ಬಂದಿದ್ದಾರೆ. ಹೌದು, ರಿಯಲ್ ಸ್ಟಾರ್ ಉಪೇಂದ್ರ ಮುಖ್ಯ ಭೂಮಿಕೆಯ ಸಿನಿಮಾಗಾಗಿ ಅವರು ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ. ಅಷ್ಟಕ್ಕೂ ಅದು ಯಾವ ಸಿನಿಮಾ ಅಂತೀರಾ? ಮುಂದೆ ಓದಿ.

 

 

ಉಪ್ಪಿಯ ‘ಐ ಲವ್ ಯೂ’ ಚಿತ್ರದಲ್ಲಿ ಬ್ರಹ್ಮಾನಂದಂ ಕೂಡ ಹಾಸ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.. ‘ಐ ಲವ್ ಯೂ’ ಸಿನಿಮಾದ ಕನ್ನಡ ಹಾಗೂ ತೆಲುಗಿನಲ್ಲಿ ನಿರ್ಮಾಣ ಆಗಿದ್ದು, ಬ್ರಹ್ಮಾನಂದಂ ಎರಡೂ ಭಾಷೆಗಳಲ್ಲಿ ನಟಿಸಿದ್ದಾರೆ.. ಆರ್ ಚಂದ್ರು ನಿರ್ದೇಶನ ಮತ್ತು ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಜೂನ್ 14ರಂದು ತೆರೆಕಾಣುತ್ತಿದೆ.

ಅಂದಹಾಗೆ ಬ್ರಹ್ಮಾನಂದಂ ಅವರು ಪುನೀತ್ ರಾಜ್ ಕುಮಾರ್ ನಟನೆಯ ‘ನಿನ್ನಿಂದಲೆ’ ಸಿನಿಮಾ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದರು. ಆ ಬಳಿಕ ನಿಖಿಲ್ ಕುಮಾರ್ ನಟನೆಯ ‘ಜಾಗ್ವರ್’ ಸಿನಿಮಾದಲ್ಲಿಯೂ ಕೂಡ ಕಾಣಿಸಿಕೊಂಡಿದ್ದರು. ಇದೀಗ ಐ ಲವ್ ಯೂ ಬ್ರಹ್ಮಾನಂದಂ ಅವರ ಮೂರನೇ ಕನ್ನಡ ಸಿನಿಮಾವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top