fbpx
ಸಮಾಚಾರ

36 ವರ್ಷದ ಬಳಿಕ ತಮ್ಮ ಕನ್ನಡ ಸಿನಿಮಾ ನೆನೆದು ಭಾವುಕರಾದ ಅನಿಲ್ ಕಪೂರ್.

ಬಾಲಿವುಡ್ ನಟ ಅನಿಲ್ ಕಪೂರ್ ತಮ್ಮ ಸಿನಿಮಾ ವೃತ್ತಿ ಶುರುಮಾಡಿದ್ದು ಕನ್ನಡದ ಮೂಲಕ ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಹೌದು, ಅನಿಲ್ ಕಪೂರ್ ಅವರು 1983ರಲ್ಲಿ ಬಿಡುಗಡೆಯಾಗಿದ್ದ ‘ಪಲ್ಲವಿ ಅನುಪಲ್ಲವಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಇಳಯರಾಜಾ ಸಂಗೀತದಲ್ಲಿ ಮೂಡಿ ಬಂದ ಹಾಡುಗಳು ಆ ಕಾಲದಲ್ಲಿ ಸೂಪರ್ ಹಿಟ್ ದಾಖಲಿಸಿದ್ದವು. ಈಗಲೂ ಸಹ ಈ ಚಿತ್ರದ ಹಾಡುಗಳನ್ನು ಕೇಳಿದವರು ತಲೆದೂಗುವುದು ಗ್ಯಾರಂಟಿ.

36 ವರ್ಷದ ಬಳಿಕ ಅನಿಲ್ ಕಪೂರ್ ಈ ಸಿನಿಮಾವನ್ನು ನೆನೆಸಿಕೊಂಡು ಭಾವುಕರಾಗಿದ್ದಾರೆ. ಇದಕ್ಕೆ ಕಾರಣ ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ. ‘ಪಲ್ಲವಿ-ಅನುಪಲ್ಲವಿ’ ಚಿತ್ರದ ಬಗ್ಗೆ ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದನ್ನು ನೋಡಿದ ಅನಿಲ್ ಕಪೂರ್ ಟ್ವೀಟ್ ಶೇರ್ ಮಾಡಿಕೊಂಡು ಭಾವುಕರಾಗಿದ್ದಾರೆ.

 

 

‘ಕೆಲವು ಸಂಗತಿಗಳು ನಮ್ಮ ಹಳೇ ದಿನಗಳನ್ನು ನೆನಪಿಸುತ್ತವೆ. ಸ್ನೇಹಿತರು, ಸಹೋದ್ಯೋಗಿಗಳು, ಭೇಟಿ ನೀಡಿದ ಜಾಗ, ಸವಿದ ಆಹಾರ ಎಲ್ಲವೂ ಸ್ಮೃತಿ ಪಟಲದಲ್ಲಿ ಬಿತ್ತರವಾಗುತ್ತವೆ. ಅದನ್ನೆಲ್ಲ ಪಡೆಯಲು ನಾವು ಪುಣ್ಯ ಮಾಡಿದ್ದೆವು ಎಂದುಕೊಳ್ಳಬೇಕಷ್ಟೇ. ನನ್ನ ಮೊದಲ ಮತ್ತು ಏಕೈಕ ಕನ್ನಡ ಸಿನಿಮಾ ‘ಪಲ್ಲವಿ ಅನುಪಲ್ಲವಿ’ ಶೂಟಿಂಗ್ ದಿನಗಳು ಈಗ ನೆನಪಾಗುತ್ತಿವೆ’ ಎಂದು ಟ್ವಿಟರ್​ನಲ್ಲಿ ಅನಿಲ್ ಕಪೂರ್ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top