fbpx
ಸಮಾಚಾರ

ಒಂದೇ ವಾರಕ್ಕೆ ಡಬಲ್ ಲಾಭ ಗಳಿಸಿದ ಪಿಎಂ ನರೇಂದ್ರಮೋದಿ ಸಿನಿಮಾ.

ಮೇ 24 ರಂದು ತೆರೆಕಂಡಿದ್ದ ಪಿಎಂ ನರೇಂದ್ರ ಮೋದಿ ಸಿನಿಮಾ ಯಶಸ್ವಿ ಒಂದು ವಾರ ಪೂರೈಸಿದೆ. ರಿಲೀಸ್ ಆದ ನಂತರ ಮಿಶ್ರ ಪ್ರತಿಕ್ರಿಯೆ ಕಂಡಿದ್ದ ಸಿನಿಮಾ ಇದೀಗ ಒಂದೇ ವಾರದಲ್ಲಿ ಡಬಲ್ ಲಾಭ ಗಳಿಸಿದೆ ಎಂದು ಹೇಳಲಾಗಿದೆ. ಹೌದು ಮೊದಲ ದಿನ 2.88 ಕೋಟಿ ರೂ. ಗಳಿಸಿದ್ದ ಮೋದಿ ಸಿನಿಮಾ, ಮೊದಲ ಮೂರು ದಿನದಲ್ಲಿ 11 ಕೋಟಿ ಕಲೆಕ್ಷನ್ ಮಾಡಿತ್ತು. ಸಾಕಷ್ಟು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿರುವ ‘ಪಿಎಮ್ ನರೇಂದ್ರ ಮೋದಿ’ ಚಿತ್ರವು ಇದೀಗ ಏಳನೇ ದಿನಕ್ಕೆ 19.21 ಕೋಟಿ ಗಳಿಸಿದೆ ಎನ್ನಲಾಗಿದೆ.

ವಿಶೇಷ ಅಂದರೆ ‘ಮೋದಿ ಜೇವನದಾರಿತ’ ಸಿನಿಮಾ ಕೇವಲ 8 ಕೋಟಿ ಬಜೆಟ್ ನಲ್ಲಿ ತಯಾರಿಸಲಾಗಿತ್ತಂತೆ. ಅದರೆ ಈಗಾಗಲೇ ಅದು 19.21 ಕೋಟಿ ಗಳಿಸಿದ್ದು ಬಜೆಟ್ ಮತ್ತು ಗಳಿಕೆ ಹೋಲಿಸಿಕೊಂಡರೆ ಚಿತ್ರವು ಯಶಸ್ವಿಯಾಗಿದೆ ಎಂದು ಬಾಲಿವುಡ್ ವಿಮರ್ಶಕರು ಹೇಳುತ್ತಿದ್ದಾರೆ.. ಇನ್ನು ಮುಂದಿನ ದಿನಗಳಲ್ಲಿ ಈ ಚಿತ್ರವು ಉತ್ತಮ ಮೊತ್ತವನ್ನು ಗಳಿಕೆ ಮಾಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಈ ಚಿತ್ರವನ್ನು ಒಮಂಗ್ ಕುಮಾರ್ ನಿರ್ದೇಶನ ಮಾಡಿದ್ದು ಪಿಎಂ ಮೋದಿ ಬಯೋಪಿಕ್‌ನಲ್ಲಿ ‘ನರೇಂದ್ರ ಮೋದಿ’ ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ಬಿಡುಗಡೆಯಾಗುತ್ತೆ ಘೋಷಿಸಿದ್ದ ಈ ಚಿತ್ರ ನೀತಿ ಸಂಹಿತೆ ವಿಚಾರವಾಗಿ ಹಲವು ಅಡೆತಡೆಗಳನ್ನು ಎದುರಿಸಿ, ಚುನಾವಣೆ ಬಳಿಕ ಅಂದ್ರೆ ಫಲಿತಾಂಶ ಬಂದ ಮಾರನೇ ದಿನವೇ ರಿಲೀಸ್ ಆಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top