fbpx
ಸಮಾಚಾರ

“ನಾಥೂರಾಮ ಗೋಡ್ಸೆ ಪರ ಬೆಂಬಲ ವ್ಯಕ್ತಪಡಿಸಿದ್ದವರು ಗೆದ್ದಿದ್ದು ಬೇಸರ ತಂದಿದೆ” ಪೇಜಾವರ ಶ್ರೀ.

ರಾಜ್ಯದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲಾಗಬಾರದಿತ್ತು ಎಂದು ಪೇಜಾವರ ಮಠದ ಮಠಾಧಿಪತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯನ್ನು ಸೋಲಿಸಬೇಕೆಂಬ ಏಕೈಕ ಉದ್ದೇಶದಿಂದ ಜೆಡಿಎಸ್, ಕಾಂಗ್ರೆಸ್ ಒಂದಾಗಿದ್ದರಿಂದ ಜನರಲ್ಲಿ ಹಿಂದುತ್ವದ ಭಾವನೆ ಜಾಗೃತವಾಯಿತು. ಅದೇ ಕಾರಣದಿಂದಾಗಿ‌ ಈ ಎಲ್ಲಾ ನಾಯಕರು ಸೋಲಬೇಕಾಗಿ ಬಂತು’ ಎಂದು ಶ್ರೀಗಳು ವಿಶ್ಲೇಷಿಸಿದರು.

ನಾಥೂರಾಮ ಗೋಡ್ಸೆ ಪರ ಬೆಂಬಲ ವ್ಯಕ್ತಪಡಿಸಿದ್ದ ಬಿಜೆಪಿ ಅಭ್ಯರ್ಥಿಗಳ ಪರ ಮಾತನಾಡಿದ ಅವರು “ಗೋಡ್ಸೆ ಪರ ವಕಾಲತು ವಹಿಸಿದ ವ್ಯಕ್ತಿ ಚುನಾವಣೆಯಲ್ಲಿ ಗೆದ್ದದ್ದು ನನಗೆ ಅಸಮಾಧಾ‌ನ ತಂದಿದೆ. ಅಂತಹವರು ಗೆಲ್ಲಬಾರದಿತ್ತು” ಎಂದೂ ನುಡಿದರು.

“ದೇಶದಲ್ಲಿ ಮುಸ್ಲೀಮರಿಗೆ ಹೆಚ್ಚಿನ ಸವಲತ್ತುಗಳಿವೆ. ಆದರೆ, ಹಿಂದೂಗಳಿಗೆ ಕಡಿಮೆ ಸವಲತ್ತಿವೆ. ಈ ರೀತಿಯ ಪರಿಸ್ಥಿತಿಯನ್ನು ಹೋಗಲಾಡಿಸಬೇಕು. ಎಲ್ಲಾ ಧರ್ಮದವರು ಒಂದೇ ಸಮನಾದ ಸವಲತ್ತುಗಳನ್ನು ಹೊಂದುವಂತಾಗಬೇಕು. ಸರ್ವಧರ್ಮ ಸಮಾನತೆ ದೇಶಾದ್ಯಂತ ಜಾರಿಯಾಗಬೇಕು.” ಎಂದು ಕೂಡ ಶ್ರೀಗಳು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top