fbpx
ಸಮಾಚಾರ

ಈ ಕಾರಣಕ್ಕಾಗಿ ಪ್ರಪಂಚದ ಅತಿ ಎತ್ತರದ ಕಟೌಟ್ ಅನ್ನು ಕಿತ್ತೊಗೆದ ಅಧಿಕಾರಿಗಳು.

ತಮಿಳು ನಟ ಸೂರ್ಯ ಅಭಿನಯದ ಬಹು ನಿರೀಕ್ಷಿತ ‘ಎನ್‌ಜಿಕೆ’ ಚಿತ್ರವು ನಿನ್ನೆ, ಶುಕ್ರವಾರ ಬಿಡುಗಡೆಯಾಗಿದೆ. ಸೂರ್ಯ ಅಭಿಮಾನಿಗಳು ಸಖತ್ ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ. ಆದರೆ, ಈ ಸಂಭ್ರಮದ ನಡುವೆ ಸೂರ್ಯ ಅಭಿಮಾನಿಗಳಿಗೆ ಶಾಕ್ ಸಿಕ್ಕಿದೆ. ಏಕೆಂದರೆ, ಸೂರ್ಯ ಅಭಿಮಾನಿಗಳು ಅಭಿಮಾನದಿಂದ 6 ಲಕ್ಷ ಹಣ ಖರ್ಚು ಮಾಡಿ ನಿರ್ಮಿಸಿದ್ದ 215 ಅಡಿ ಕಟೌಟ್ ನಿರ್ನಾಮವಾಗಿದೆ.

ಅನುಮತಿ ಪಡೆದಿರಲಿಲ್ಲ:
ಜಗತ್ತಿನ ಅತಿ ದೊಡ್ಡ ಕಟೌಟ್ ಎಂಬ ಕಾರಣಕ್ಕೆ ಸೂರ್ಯ ಅವರ ಈ ಕಟೌಟ್ ಭಾರಿ ಸುದ್ದಿಯಾಗಿತ್ತು. ಆದರೆ, ಹೈಕೋರ್ಟ್ ಸೂಚನೆಯಂತೆ ತಿರುತ್ತಣಿ ಮುನ್ಸಿಪಾಲ್ ಅಧಿಕಾರಿಗಳು ಖುದ್ದು ಸೂರ್ಯ ಅವರ ಅತಿ ಎತ್ತರದ ಕಟೌಟ್ ವನ್ನ ತೆಗೆದು ಹಾಕಿದ್ದಾರೆ. ಕಟೌಟ್ ನಿಲ್ಲಿಸಲು ಸೂರ್ಯ ಫ್ಯಾನ್ಸ್ ಯಾವುದೇ ಪರವಾನಗಿ ಪಡೆದಿರಲಿಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲ, ಜನರು ಓಡಾಡುವ ಜಾಗದಲ್ಲಿ ಅಷ್ಟೊಂದು ದೊಡ್ಡ ಕಟೌಟ್ ಇರುವುದು ಅಪಾಯಕಾರಿ ಎಂಬ ಕಾರಣಕ್ಕೆ ಅದನ್ನು ಕೆಡವಿಹಾಕಿದ್ದಾರಂತೆ.

ಸೂರ್ಯ ಅಭಿಮಾನಿಗಳು ಈ ಬೃಹತ್ ಕಟೌಟ್‌ಗೆ ಆರು ಲಕ್ಷ ಖರ್ಚು ಮಾಡಿದ್ದರಂತೆ. ಸುಮಾರು ಒಂದು ತಿಂಗಳ ಕಾಲ ಈ ಕಟೌಟ್ ನಿರ್ಮಾಣ ಕಾರ್ಯ ನಡೆದಿತ್ತು. ಆದರೆ ರಿಲೀಸ್ ದಿನವೇ ಚೆನ್ನೈ ಪಾಲಿಕೆ ಅಧಿಕಾರಿಗಳು ಕಟೌಟ್ ಅನ್ನು ಕೆಡವಿದ್ದಾರೆ. ಇದರಿಂದ ಬೇಸರಗೊಂಡ ಸೂರ್ಯ ಅಭಿಮಾನಿಗಳು ಪ್ರತಿಭಟನೆ ಕೂಡಾ ಮಾಡಿದ್ದಾರೆ ಎಂದು ವರದಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top