fbpx
ಸಮಾಚಾರ

ಚುನಾವಣೆಯ ನಂತರ ‘ಚೌಕಿದಾರ್’ ಆದ ಗೋಲ್ಡನ್ ಸ್ಟಾರ್ ಗಣೇಶ್.

ಲೋಕಸಭಾ ಚುನಾವಣೆಯ ವೇಳೆಯಲ್ಲಿ ಅತಿ ಹೆಚ್ಚು ಸೌಂಡ್ ಮಾಡಿದ್ದ ಪದ ಅಂದ್ರೆ ‘ಚೌಕಿದಾರ್’. ಹೌದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರು, ಬೆಂಬಲಿಗರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯ ಹೆಸರಿನ ಮುಂದೆ ‘ಚೌಕಿದಾರ್’ ಎಂದು ಬರೆದುಕೊಂಡಿದ್ದರು. ಕೊನೆಗೆ ಫಲಿತಾಂಶದ ದಿನದಂದೇ ಪ್ರಧಾನಿಗಳ ನಿರ್ದೇಶನದಂತೆ ಎಲ್ಲರೂ ಚೌಕಿದಾರ್ ಹೆಸರನ್ನು ತೆಗೆದುಕೊಂಡಿದ್ದರು. ಈ ವಿಷ್ಯ ಈಗ ಏಕೆ ಅಂತೀರಾ? ಮುಂದೆ ಓದಿ.

ಇದೀಗ ಕನ್ನಡದ ಗೋಲ್ಡನ್ ಸ್ಟಾರ್ ‘ಚೌಕಿದಾರ್’ ಆಗಿ ಗಾಂಧಿ ನಗರದಲ್ಲಿ ಧೂಳೆಬ್ಬಿಸಲು ಸಜ್ಜಾಗುತ್ತಿದ್ದಾರೆ. ರಥಾವರ ಸಿನಿಮಾ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್’ ಚಿತ್ರದಲ್ಲಿ ಗಣೇಶ್ ನಟಿಸುತ್ತಿದ್ದಾರೆ. ವಾಣಿಜ್ಯ ಮಂಡಳಿ ‘ಚೌಕಿದಾರ್’ ಟೈಟಲ್ ಅನ್ನು ಎರಡು ತಿಂಗಳ ಮುಂಚೆಯೇ ಚಿತ್ರತಂಡಕ್ಕೆ ನೀಡಿದೆ..

ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು 55 ವರ್ಷದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಲಿದ್ದು ಗಣೇಶ್ ವೃತ್ತಿ ಜೀವನದಲ್ಲಿ ಎಂದೂ ಮಾಡಿರದ ರೀತಿಯ ಪಾತ್ರ ಇದಾಗಿರಲಿದೆಯಂತೆ. ಇನ್ನು ರಾಜಕೀಯಕ್ಕೂ ಈ ಕಥೆಗೂ ಏನಾದರೂ ಸಂಬಂಧ ಇದೆಯಾ ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.. ಉಳಿದಂತೆ ಚಿತ್ರಕ್ಕೆ ಸಂಭಂದಿಸಿದ ತಾರಾಗಣ ಮತ್ತು ತಾಂತ್ರಿಕ ವರ್ಗದ ಮಾಹಿತಿಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top