fbpx
ಸಮಾಚಾರ

ಬಡವರಿಗಾಗಿ ಬರೋಬ್ಬರಿ 1.2 ಲಕ್ಷ ಕೋಟಿ ಆಸ್ತಿ ದಾನ ಮಾಡಿ ಉದಾರತೆ ಮೆರೆದ ವಿಶ್ವದ ಶ್ರೀಮಂತ ಮಹಿಳೆ.

ವಿಶ್ವದ ಅತಿ ಶ್ರೀಮಂತ ಉದ್ಯಮಿ, ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಅವರಿಂದ ಇತ್ತೀಚೆಗಷ್ಟೇ ವಿಚ್ಛೇದನ ಪಡೆದ ಮೆಕೆನ್ಜಿ ಬೆಜೋಸ್‌ ತಮ್ಮ ಒಟ್ಟು ಆಸ್ತಿಯ ಅರ್ಧದಷ್ಟು ದಾನ ಮಾಡುವುದಾಗಿ ಘೋಷಿಸಿದ್ದಾರೆ.

ಅಮೆಜಾನ್‌ನಲ್ಲಿ ಮೆಕೆನ್ಜಿ ಶೇ.4ರಷ್ಟುಷೇರು ಹೊಂದಿದ್ದು, ಇವುಗಳ ಮೌಲ್ಯ ಸುಮಾರು 2.51 ಲಕ್ಷ ಕೋಟಿ ರು. ಈ ಪೈಕಿ ಸುಮಾರು 1.20 ಲಕ್ಷ ಕೋಟಿ ರು.ಗಳನ್ನು ಬಿಲ್‌ಗೇಟ್ಸ್‌ ಸೇರಿದಂತೆ ಶ್ರೀಮಂತ ಉದ್ಯಮಿಗಳು ಸ್ಥಾಪಿಸಿರುವ ಗೀವಿಂಗ್‌ ಪ್ಲೆಡ್ಜ್‌ ಆಂದೋಲನಕ್ಕೆ ನೀಡುವುದಾಗಿ ಮೆಕೆನ್ಜಿ ಘೋಷಿಸಿದ್ದಾರೆ.

ಇನ್ನು ಈ ಬಗ್ಗೆ ಹೇಳಿಕೊಂಡಿರುವ ಮೆಕೆನ್ಜಿ ‘ನನ್ನ ಜೀವನ ನನಗೆ ಗಳಿಸಿಕೊಟ್ಟಿರುವ ಅಳತೆ ಮೀರಿದ ಹಣವನ್ನು ಹಂಚಿಕೆ ಮಾಡಬೇಕು ಎಂದುಕೊಂಡಿದ್ದೇನೆ. ಈ ದೊಡ್ಡ ಜವಾಬ್ದಾರಿ ನಿರ್ವಹಣೆಗಾಗಿ ಶ್ರಮ ಮತ್ತು ಸಮಯದ ಅಗತ್ಯವಿದೆ. ಆ ಸಮಯಕ್ಕಾಗಿ ಕಾಯಲು ನಾನು ಸಿದ್ಧಳಿಲ್ಲ. ನಾನು ದಾನ-ಧರ್ಮದ ಕೆಲಸವು ಹೀಗೆಯೇ ಮುಂದುವರಿಯಲಿದೆ’ ಎಂದು ಹೇಳಿದ್ದಾರೆ.

ಈ ನಡುವೆ ಪತ್ನಿಯ ಈ ಕೆಲಸಕ್ಕೆ ಪ್ರತಿಕ್ರಿಯಿಸಿರುವ ಜೆಫ್‌ ಬೆಜೋಸ್‌ ‘ಅದ್ಭುತವಾದ ಕೆಲಸಕ್ಕೆ ಇಳಿದಿದ್ದಾರೆ. ಇದೊಂದು ರೀತಿಯ ಉತ್ತಮ ಕಾರ್ಯ. ಈ ಕಾರ್ಯಕ್ಕಾಗಿ ಆಕೆ ಬಗ್ಗೆ ನನಗೆ ಹೆಮ್ಮೆಯಿದೆ’ ಎಂದು ಶ್ಲಾಘಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top