fbpx
ಸಮಾಚಾರ

ಕನ್ನಡಿಗರಿಗೆಯೇ ಸಿಕ್ತು ಅನಂತ್ ಕುಮಾರ್ ಬಿಟ್ಟುಹೋದ ಎರಡೂ ಖಾತೆಗಳು.

ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಅನಂತ್ ಕುಮಾರ್ ಅವರು ನಿರ್ವಹಿಸಿದ ಖಾತೆಗಳನ್ನು ಇಬ್ಬರು ಕರ್ನಾಟಕದ ಸಂಸದರಿಗೆ ಹಂಚಲಾಗಿದೆ. ರಾಜ್ಯದ ಡಿ.ವಿ.ಸದಾನಂದಗೌಡ ಹಾಗೂ ಪ್ರಹ್ಲಾದ್ ಜೋಶಿ ಅವರಿಗೆ ಎರಡು ಖಾತೆಗಳನ್ನು ನೀಡಲಾಗಿದೆ.

ಸದಾನಂದಗೌಡಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ
ಕೇಂದ್ರ ಸಂಪುಟದಲ್ಲಿ 5ನೆಯವರಾಗಿ ಪ್ರಮಾಣವಚನ ಸ್ವೀಕರಿಸಿದ ಬೆಂಗಳೂರು ಉತ್ತರ ಸಂಸದ ಡಿ.ವಿ.ಸದಾನಂದಗೌಡ ಅವರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ನೀಡಲಾಗಿದೆ.

ಪ್ರಹ್ಲಾದ್‌ ಜೋಶಿಗೆ ಸಂಸದೀಯ ವ್ಯವಹಾರ
ಸತತ 4ನೇ ಸಲ ಗೆದ್ದು ಇದೀಗ ಕೇಂದ್ರದಲ್ಲಿ ಸಂಪುಟ ದರ್ಜೆಯ ಸಚಿವರಾಗಿರುವ ಧಾರವಾಡ ಸಂಸದ ಪ್ರಹ್ಲಾದ್‌ ಜೋಶಿಗೆ 3 ಮಹತ್ವದ ಖಾತೆ ದೊರೆತಿದೆ. ಹಿಂದೆ ಕನ್ನಡಿಗರೇ ಆದ ಅನಂತ್‌ ಕುಮಾರ್‌ ನಿರ್ವಹಿಸುತ್ತಿದ್ದ ಸಂಸದೀಯ ವ್ಯವಹಾರಗಳ ಖಾತೆ ಜೊತೆಗೆ ಕಲ್ಲಿದ್ದಲು, ಗಣಿ ಖಾತೆ ಜೋಶಿಗೆ ಸಿಕ್ಕಿದೆ.

ಅಂದಹಾಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸತತ ಆರು ಬಾರಿ ಸಂಸತ್ ಪ್ರವೇಶಿಸಿದ್ದ ಅನಂತ್ ಕುಮಾರ್ ಅವರು ಒಮ್ಮೆಯೂ ಸೋಲು ಕಂಡಿರಲಿಲ್ಲ. ಅನಂತ್ ಕುಮಾರ್ ಅವರ ಗೈರು ಹಾಜರಿಯಲ್ಲಿ ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಬೇರೆ ಅಭ್ಯರ್ಥಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top