fbpx
ಸಮಾಚಾರ

HD ದೇವೇಗೌಡರು ಪ್ರಧಾನಿಯಾಗಿ ಇಂದಿಗೆ 23 ವರ್ಷ.

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಇಂದಿಗೆ ಸರಿಯಾಗಿ 23 ವರ್ಷ ಕಳೆದಿದೆ.

1996ರ ಲೋಕಸಭಾ ಚುನಾವಣೆಯಲ್ಲಿ ಯಾವ ಒಂದು ರಾಜಕೀಯ ಪಕ್ಷಕ್ಕೂ ಲೋಕಸಭೆಯಲ್ಲಿ ಸ್ಪಷ್ಟ ಬಹುಮತವಿರಲಿಲ್ಲ. ಆಗ ಅನೇಕ ರಾಜಕೀಯ ಪಕ್ಷಗಳ ಮೈತ್ರಿತ್ವವಾದ ತೃತೀಯ ರಂಗ ದೇವೇಗೌಡರನ್ನು ತಮ್ಮ ನಾಯಕರಾಗಿ ಚುನಾಯಿಸಿತು. ದೇವೇಗೌಡರು ಮೇ 30, 1996 ರಂದು ಭಾರತದ 11ನೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 1997ರವರೆಗೆ ಪ್ರಧಾನ ಮಂತ್ರಿ ಸ್ಥಾನದಲ್ಲಿದ್ದ ದೇವೇಗೌಡರು ಒಂದೇ ವರ್ಷದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಹೆಚ್.ಡಿ ದೇವೇಗೌಡರು ಜೂನ್ 1 1996ರಿಂದ 21 ಏಪ್ರಿಲ್ 1997 ರವರೆಗಿನ ಅತ್ಯಲ್ಪ ಕಾಲದ ಅವಧಿಯ ಆಡಳಿತ ನಡೆಸಿದ್ದರೂ ಈ ಅವಧಿಯಲ್ಲೇ ಅತ್ಯಂತ ಪ್ರಮುಖವಾದ ಹಲವಾರು ಯೋಜನೆಗಳನ್ನು ದೇಶಕ್ಕೆ ಮತ್ತು ರಾಜ್ಯಕ್ಕೆ ಕೊಡುಗೆಯನ್ನಾಗಿ ನೀಡಿದ್ದಾರೆ. ಆನಂತರ ನಂತರದ ವರ್ಷಗಳಲ್ಲಿ ದೇವೇಗೌಡರು ಜಾತ್ಯತೀತ ಜನತಾ ದಳದ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top