fbpx
ಸಮಾಚಾರ

ಅನಂತ್ ಕುಮಾರ್ ಹೆಗಡೆಗೆ ಮಂತ್ರಿ ಸ್ಥಾನ ಕೈ ತಪ್ಪಲು ಇದೇ ಮುಖ್ಯ ಕಾರಣವಾಯ್ತಾ?

ಕಳೆದ ಬಾರಿ ಮೋದಿ ಸರ್ಕಾರದಲ್ಲಿ ಕೌಶಲಾಭಿವೃದ್ಧಿ ಸಚಿವರಾಗಿದ್ದ ಅನಂತ್ ಕುಮಾರ್ ಹೆಗಡೆ ಈ ಬಾರಿ ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿಲ್ಲ. ಅನಂತ್ ಕುಮಾರ್ ಮೋದಿ ಕ್ಯಾಬಿನೆಟ್ ನಿಂದ ಔಟ್ ಆಗಲು ಕಾರಣ ಏನಿರಬಹುದು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿಯೇ ಚರ್ಚೆಯಾಗುತ್ತಿದೆ.

ಮೋದಿ ಟೀಮ್ ನಿಂದ ಹೆಗಡೆ ಔಟ್ ಆಗಲು ಅವರ ಅನಗತ್ಯ ಹೇಳಿಕೆಗಳೇ ಕಾರಣ ಎಂದು ಹೇಳಲಾಗುತ್ತಿದೆ. ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡದೇ ಪದೇ ಪದೇ ತಾವು ನೀಡುತ್ತಿದ್ದ ಹೇಳಿಕೆಗಳು ಪಕ್ಷವನ್ನು ಮುಜುಗರಕ್ಕೆ ಈಡುಮಾಡುತ್ತಿದುದೇ ಸಚಿವ ಸ್ಥಾನ ಕೈ ತಪ್ಪಲು ಕಾರಣ ಎನ್ನಲಾಗುತ್ತಿದೆ.

ಕಳೆದ ವಿಧಾನಸಭೆ ಚುನಾವಣೆಯ ವೇಳೆ ತಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿ ಎಂದು ಹೇಳಿ ಪಕ್ಷವನ್ನು ಪೇಚಿಗೆ ಸಿಲುಕಿಸಿದ್ದರು.. ಅಷ್ಟು ಸಾಲದ್ದಕ್ಕೆ ಈ ಚುನಾವಣೆ ಯಲ್ಲಿ ಗಾಂಧೀಜಿ ಹಂತಕ ಗೋಡ್ಸೆ ದೇಶಭಕ್ತ ಎಂಬುದನ್ನು ಸಮರ್ಥಿಸಿ ವಿವಾದಾಸ್ಪದ ಟ್ವೀಟ್‌ ಕೂಡ ದುಬಾರಿಯಾಗಿ ಪರಿಣಮಿಸಿದೆ. ಈ ಎಲ್ಲ ಕಾರಣದಿಂದ ಮೋದಿ ಅವರು ಮೋದಿ ಕ್ಯಾಬಿನೆಟ್ ಸೇರಲು ವಿಫಲರಾಗಿದ್ದಾರೆ ಎಂದು ಹಿರಿಯ ಬಿಜೆಪಿ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top