fbpx
ಸಮಾಚಾರ

ಅಂಬಿ ಪುತ್ರನ ‘ಅಮರ್’ ಚಿತ್ರಕ್ಕೆ ಶುಭಹಾರೈಸಿದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ: ವಿಡಿಯೋ ನೋಡಿ

ದಿವಂಗತ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಂಬರೀಷ್ ಅವರ ಚೊಚ್ಚಲ ಚಿತ್ರ ‘ಅಮರ್ ‘ ಶುಕ್ರವಾರ ಬಿಡುಗಡೆಯಾಗಿದ್ದು, ರಾಜ್ಯದಾಧ್ಯಂತ ಉತ್ತಮ ಪ್ರದರ್ಶನ ನೀಡುತ್ತಿದೆ.

ಅಭಿಷೇಕ್ ಮೊದಲ ಸಿನಿಮಾ ತೆರೆಕಂಡ ಖುಷಿಯಲ್ಲಿರುವಾಗ ಭಾರತೀಯ ಕ್ರಿಕೆಟಿಗನೊಬ್ಬ ಅಭಿಗೆ ವಿಶ್ ಮಾಡಿದ್ದಾರೆ. ಅವರೇ ಅಭಿಷೇಕ್ ಆತ್ಮೀಯ ಸ್ನೇಹಿತ , ಕ್ರಿಕೆಟಿಗ ಕೆ.ಎಲ್.ರಾಹುಲ್.

ಅಭಿಷೇಕ್ ಅಂಬರೀಶ್ ರವರ ಆಪ್ತ ಗೆಳೆಯ ಹಾಗೂ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್, ‘ಅಮರ್’ ಚಿತ್ರಕ್ಕೆ ಶುಭಹಾರೈಸಿದ್ದಾರೆ. ನನಗೆ ಗೊತ್ತು ಈ ಚಿತ್ರಕ್ಕಾಗಿ ನೀನು ಎಷ್ಟು ಕಷ್ಟ ಪಟ್ಟಿದ್ದೀಯೆಂದು. ನಾನು ಅಲ್ಲಿ ಇರಬೇಕಿತ್ತು. ಆದರೆ ಇರಲಾಗುತ್ತಿಲ್ಲ. ನಿನಗೆ ಒಳ್ಳೆಯದಾಗಲಿ’ ಎಂದು ಆಪ್ತನಿಗೆ ರಾಹುಲ್ ಶುಭ ಹಾರೈಸಿದ್ದಾರೆ.

ರಾಹುಲ್ ವಿಡಿಯೋವನ್ನು ಸುಮಲತಾ ಅವರು ತಮ್ಮ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿ ಅದಕ್ಕೆ, “ಅಭಿಷೇಕ್ ಅಂಬರೀಶ್ ಅವರ ಆಪ್ತ ಗೆಳೆಯ ಹಾಗೂ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ಇಂದು ಬಿಡುಗಡೆಯಾಗಲಿರುವ ಅಮರ್ ಚಿತ್ರಕ್ಕೆ ಶುಭಹಾರೈಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top