fbpx
ಸಮಾಚಾರ

ದಾಖಲೆಯೊಂದಿಗೆ ವಿಶ್ವಕಪ್ ಆರಂಭಿಸಿದ ಸ್ಪೋಟಕ ಆಟಗಾರ ಆಂಡ್ರೇ ರಸೆಲ್.

ವೆಸ್ಟ್ ತಂಡದ ಸ್ಪೋಟಕ ಆಟಗಾರ ಆಂಡ್ರೇ ರಸೆಲ್ ಅವರು ದಾಖೆಲೆಯೊಂದರ ಜೊತೆ ವಿಶ್ವಕಪ್ ಗೆ ಕಾಲಿಡುತ್ತಿದ್ದಾರೆ . ಸಮಕಾಲೀನ ಆಟಗಾರರ ಪೈಕಿ ಅತಿ ಹೆಚ್ಚು ಸ್ಟ್ರೇಕ್‌ರೇಟ್ ಕಾಪಾಡಿಕೊಂಡು ವಿಶ್ವಕಪ್‌ಗೆ ಎಂಟ್ರಿ ಕೊಟ್ಟಿರುವ ಆಟಗಾರ ಎಂಬ ಹಿರಿಮೆಗೆ ರಸೆಲ್ ಪಾತ್ರವಾಗಿದ್ದಾರೆ.

ಒಟ್ಟು 52 ಏಕದಿನ ಪಂದ್ಯಗಳಲ್ಲಿ ರಸೆಲ್ 130.45ರ ಸ್ಟ್ರೇಕ್‌ರೇಟ್ ಕಾಪಾಡಿಕೊಂಡಿದ್ದಾರೆ. ವಿಶ್ವಕಪ್ ನಲ್ಲಿ ಆಡುತ್ತಿರುವ ಪ್ರಸಕ್ತ ಆಟಗಾರರ ಪೈಕಿ ರಸಲ್ ಅವರ 130.45 ಅತಿ ಹೆಚ್ಚಿನ ಸ್ಟ್ರೈಕ್ ರೆಟ್ ಆಗಿದೆ.. ಇನ್ನು ದೊಡ್ಡ ಸ್ಕೋರ್ ಗಳಿಗೆ ಹೆಸರುವಾಸಿಯಾಗಿರುವ ಇಂಗ್ಲೆಂಡ್ ನಲ್ಲಿ ಇವರ ಸ್ಟ್ರೈಕ್ ರೈಟ್ ಮತ್ತಷ್ಟು ಹೆಚ್ಚಾಗಲಿದೆ ಎಂದು ಕ್ರಿಕೆಟ್ ತಜ್ಞರು ಹೇಳುತ್ತಿದ್ದಾರೆ.

ಅಂದಹಾಗೆ ನ್ಯೂಝಿಲ್ಯಾಂಡ್ ವಿರುದ್ಧ ಆಡಿದ್ದ ಅಭ್ಯಾಸ ಪಂದ್ಯದಲ್ಲಿ ಭರ್ಜರಿಯಾಗಿಯೇ ಬ್ಯಾಟ್ ಬೀಸಿದ್ದ ರಸೆಲ್ ಕೇವಲ 23 ಎಸೆತಗಳಲ್ಲಿ ಮಿಂಚಿನ ಅರ್ಧ ಶತಕ ಭಾರಿಸಿದ್ದರು. ಕೇವಲ ಬ್ಯಾಟಿಂಗ್ ನಲ್ಲಿ ಮಾತ್ರವಲ್ಲದೆ ಬೌಲಿಂಗ್ ನಲ್ಲೂ ಮಿಂಚುವ ರಸೆಲ್ ತಂಡಕ್ಕೆ ಅಗತ್ಯ ಬಿದ್ದಾಗಲೆಲ್ಲಾ ವಿಕೆಟ್ ತೆಗೆದುಕೊಡುವ ಕ್ಷಮತೆ ಕೂಡ ಇದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top