fbpx
ಸಮಾಚಾರ

‘ಲೈಫ್ ನಲ್ಲಿ ಇನ್ಯಾವತ್ತೂ ಈ ರೀತಿಯ ಪಾತ್ರವನ್ನು ಮಾಡುವುದಿಲ್ಲ” ರಚಿತಾ ರಾಮ್.

ನಟ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯ ‘ಐ ಲವ್ ಯೂ’ ಸಿನಿಮಾದ ಟ್ರೇಲರ್ ಕಳೆದ ದಿನ ಬಿಡುಗಡೆಯಾಗಿದೆ. ಇದರಲ್ಲಿ ರಚಿತಾ ಅವರು ಮೊದಲ ಬಾರಿಗೆ ತುಂಬಾ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ ಅವರು ಇದುವರೆಗೆ ‘ಇಷ್ಟೊಂದು’ ಬೋಲ್ಡ್‌ ಆಗಿ ಕಾಣಿಸಿರಲಿಲ್ಲವಂತೆ. ಆದರೆ ಈ ಚಿತ್ರದಲ್ಲಿ ಮಾತ್ರ ಸಖತ್ ‘ಬೋಲ್ಡ್’ ಆಗಿ ಕಾಣಿಸುತ್ತಿದ್ದಾರಂತೆ!

ಈ ಬಗ್ಗೆ ಸ್ವತಃ ರಚಿತಾ ರಾಮ್ ಮಾತನಾಡಿದ್ದು ಹಾಟ್ ಪಾತ್ರಗಳ ಬಗ್ಗೆ ಟ್ರೇಲರ್ ಲಾಂಚ್ ವೇಳೆ ಹಂಚಿಕೊಂಡಿದ್ದಾರೆ. “ಐಲವ್​ಯು ಚಿತ್ರದಲ್ಲಿ ನಾನು ತುಂಬಾನೇ ಬೋಲ್ಡ್ ​​ ಆಗಿ ಅಭಿನಯಿಸಿದ್ದೇನೆ. ಒಂದು ಹೊಸ ಪ್ರಯತ್ನ ಮಾಡಲು ಸವಾಲಾಗಿ ಈ ಸಿನಿಮಾವನ್ನು ಒಪ್ಪಿಕೊಂಡಿದ್ದೆ. ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸುಮಾರು ಆರು ವರ್ಷಗಳು ಕಳೆದಿವೆ.ಆದರೇ ಇಷ್ಟು ದಿನದಲ್ಲಿ ನಾನು ಇದೇ ಮೊದಲ ಬಾರಿಗೆ ಇಷ್ಟೊಂದು ಬೋಲ್ಡ್​​ ಪಾತ್ರದಲ್ಲಿ ನಟಿಸಿದ್ದೇನೆ.”

“ನಾನು ಮತ್ತೆ ಇಷ್ಟು ಬೋಲ್ಡ್​​ ಪಾತ್ರದಲ್ಲಿ ನಟಿಸುವುದಿಲ್ಲ. ನನ್ನ ಕೆಲವು ಅಭಿಮಾನಿಗಳಿಗೆ ನನ್ನ ಬೋಲ್ಡ್ ಅವತಾರ ಇಷ್ಟವಾದ್ರೆ ಇನ್ನೂ ಕೆಲವರಿಗೆ ​​ಬೇಸರವುಂಟು ಮಾಡಿದೆ. ಕೆಲವು ಅಭಿಮಾನಿಗಳು ನಮಗೆ ನಿಮ್ಮನ್ನು ಇಂಥಹ ಪಾತ್ರದಲ್ಲಿ ನೋಡಲು ಇಷ್ಟವಾಗುತ್ತಿಲ್ಲ ಎಂದು ಮೆಸೇಜ್​​ ಮಾಡುತ್ತಿದ್ದಾರೆ. ಆದ್ದರಿಂದ ಇನ್ಮುಂದೆ ನಾನು ಇಂತಹ ಬೋಲ್ಡ್​​ ಪಾತ್ರಗಳಲ್ಲಿ ನಟಿಸುವುದಿಲ್ಲ” ಎಂದು ರಚಿತಾ ರಾಮ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top