fbpx
ಸಮಾಚಾರ

ಸರ್ಕಾರಿ ಶಾಲೆಯ 300 ಬಡ ಮಕ್ಕಳಿಗೆ ಪುಸ್ತಕ ದಾನ ಮಾಡಿದ ಪರಿಮಳ ಜಗ್ಗೇಶ್.

ನವರಸ ನಾಯಕ ಜಗ್ಗೇಶ್ ಅವರು ಸಿನಿಮಾ ಹೊರತಾಗಿಯೂ ತಮ್ಮ ಸಮಮುಖಿ ಆಲೋಚನೆ ಮಾತು ಕಾರ್ಯಗಳಿಂದ ಆಗ್ಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಅವರಂತೆ ಇದೀಗ ಅವರ ಪತ್ನಿ ಕೂಡ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಓದಬೇಕು ಎಂಬ ಆಸೆ ಇರುವ ಎಷ್ಟೋ ಮಕ್ಕಳಿಗೆ ಪೆನ್ನು, ಪುಸ್ತಕ ಕೊಂಡುಕೊಳ್ಳಲು ದುಡ್ಡಿರುವುದಿಲ್ಲ. ಅಂತವರಿಗೆ ಪರಿಮಳಾ ಜಗ್ಗೇಶ್ ಸಹಾಯ ಮಾಡಿದ್ದಾರೆ.

ಪರಿಮಳ ಜಗ್ಗೇಶ್ ಸರ್ಕಾರೀ ಶಾಲೆಯೊಂದರ 300 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗುವಂತಹ ಪೆನ್ನು, ಪೆನ್ಸಿಲಿಲ್ ಪುಸ್ಕತ ಮತ್ತು ಇತರೆ ಸಾಮಗ್ರಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಸ್ವತಃ ಜಗ್ಗೇಶ್ ಅವರೇ ಸಂತಸವನ್ನು ಹಂಚಿಕೊಂಡಿದ್ದಾರೆ. ಜಗ್ಗೇಶ್ ಪತ್ನಿ ಪರಿಮಳಾ ಈ ಉತ್ತಮ ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

“300ಸರ್ಕಾರಿ ಶಾಲೆ ಬಡಮಕ್ಕಳಿಗೆ ಪುಸ್ತಕ ಪೆನ್ನು ಪೆನ್ಸಿಲ್ ರಬ್ಬರ್ ವಿತರಿಸಿದ ಮಡದಿ ಪರಿಮಳ..ಧಾನಗಳಲ್ಲಿ ಶ್ರೇಷ್ಟ ಧಾನ ವಿಧ್ಯಾಧಾನ..” ಎಂದು ಟ್ವಿಟ್ಟರ್ ನಲ್ಲಿ ಜಗ್ಗೇಶ್ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top