fbpx
ಸಮಾಚಾರ

ಇಂಡೀಸ್ ದಾಳಿಗೆ ಪಾಕ್ ತತ್ತರ- ಕೇವಲ 105 ರನ್‌ಗೆ ಆಲೌಟ್, ಮೊದಲ ಪಂದ್ಯದಲ್ಲೇ ಪಾಕ್ ಹೀನಾಯ ಪ್ರದರ್ಶನ.

ಈ ಸಲದ ವಿಶ್ವಕಪ್‌ನಲ್ಲಿ ಗೆಲುವಿನ ಆರಂಭ ಕಾಣುವ ಕನಸಿನೊಂದಿಗೆ ಕಣಕ್ಕಿಳಿದಿರುವ ಪಾಕಿಸ್ತಾನ ತಂಡವು ಆರಂಭದಲ್ಲೇ ಮುಗ್ಗರಿಸಿದೆ. ಟ್ರೆಂಟ್‌ ಬಿಜ್‌ನಲ್ಲಿ ನಡೆಯುತ್ತಿರುವ ವೆಸ್ಟ್‌ ಇಂಡೀಸ್‌ ಎದುರಿನ ಪಂದ್ಯದಲ್ಲಿ ಸರ್ಫರಾಜ್‌ ಅಹಮದ್‌ ಬಳಗವು ಅತ್ಯಂತ ಕಳಪೆ ಪ್ರದರ್ಶನ ತೋರುತ್ತಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ತಂಡದ ಬೌಲರ್ ಗಳು ಪಾಕಿಸ್ತಾನ ಬ್ಯಾಟರ್ಸ್ ಗಳ ಮೇಲೆ ಎರಗಿದಂತೆ ದಾಳಿ ನಡೆಸಿದರು. ವೆಸ್ಟ್ ಇಂಡೀಸ್ ಬೌಲರ್ ಗಳ ದಾಳಿಗೆ ತತ್ತರಿಸಿದ ಪಾಕಿಸ್ತಾನ ಕೇವಲ 105 ರನ್ನುಗಳಿಗೆ ತನ್ನೆಲ್ಲಾ ವಿಕೇಟ್ ಗಳನ್ನೂ ಕಳೆದುಕೊಂಡು ಹೀನಾಯ ಸ್ಥಿತಿ ತಲುಪಿದೆ.

ಪಾಕಿಸ್ತಾನದ ಪರವಾಗಿ ಬಾಬರ್ ಅಜಮ್ ಮತ್ತು ಪಖಾರ್ ಜಮಾನ್ ತಲಾ 22 ರನ್ನುಗಳನ್ನು ಹೊಡೆದ್ದದ್ದೇ ಗರಿಷ್ಟ ಮೊತ್ತವಾಯಿತು, ಮತ್ತ್ಯಾವ ಆಟಗಾರನು ಕೂಡ ವೆಸ್ಟ್ ಇಂಡೀಸ್ ಬೌಲರ್ ಗಳನ್ನೂ ಎದುರಿಸಲು ಸಫಲನಾಗಲಿಲ್ಲ.

ಇನ್ನು ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದ ಓಷನ್ ಥಾಮಸ್ ವೆಸ್ಟ್ ಇಂಡೀಸ್ ಪರವಾಗಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದು ಕೇವಲ 27ರನ್ ನೀಡಿ 4ವಿಕೇಟ್ ಕಿತ್ತಿದ್ದಾರೆ. ಉಳಿದಂತೆ ನಾಯಕ ಹೋಲ್ಡರ್ 3 ಮತ್ತು ಆಂಡ್ರೇ ರಸೆಲ್ 2 ವಿಕೇಟ್ ಪಡೆದು ಮಿಂಚಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top