fbpx
ಸಮಾಚಾರ

ಟೈಟಲ್ ಬದಲಿಸುವಂತೆ ‘ಭಾರತ್’ ಚಿತ್ರದ ವಿರುದ್ಧ ದೂರು ದಾಖಲು.

ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಿರುವ ಬಹುನಿರೀಕ್ಷಿತ ಬಾಲಿವುಡ್ ಸಿನಿಮಾ ‘ಭಾರತ್’ ಚಿತ್ರಕ್ಕೆ ಈಗ ಕಂಟಕವೊಂದು ಎದುರಾಗಿದೆ. ಈ ಸಿನಿಮಾದ ಶೀರ್ಷಿಕೆ ಬದಲಿಸಬೇಕು ಎಂದು ದೆಹಲಿ ಕೋರ್ಟ್ ನ ನ್ಯಾಯಾಧೀಶ ವಿಪಿನ್ ತ್ಯಾಗಿ ಎಂಬವರು ಅರ್ಜಿ ಸಲ್ಲಿಸಿದ್ದಾರೆ.

ಸಂವಿಧಾನದ ಸೆಕ್ಷನ್ 3ರ ಪ್ರಕಾರ ‘ಭಾರತ್’ ಸಿನಿಮಾದ ಶೀರ್ಷಿಕೆ ಕಾನೂನು ಬಾಹಿರವಾಗಿದೆ. ನಮ್ಮ ದೇಶದ ಲಾಂಛನಗಳನ್ನು ಮತ್ತು ಹೆಸರನ್ನು ವಾಣಿಜ್ಯ ಉದ್ದೇಶಗಳಿಗೆ ಉಪಯೋಗಿಸಿಕೊಳ್ಳುವಂತಿಲ್ಲ. ಅಸಮರ್ಪಕ ಬಳಕೆಗಳನ್ನು ತಡೆಗಟ್ಟುವ ಕಾಯಿದೆ ಪ್ರಕಾರ ‘ಭಾರತ್’ ಎಂಬ ಹೆಸರನ್ನು ಸಿನಿಮಾ ಟೈಟಲ್ ಆಗಿ ಬಳಸುವುದು ತಪ್ಪು ದೂರಿನಲ್ಲಿ ಎಂದು ಉಲ್ಲೇಖಿಸಲಾಗಿದೆ.

‘ಭಾರತ್’ ಎಂಬ ಹೆಸರನ್ನು ಬಳಸಿರುವ ಕಾರಣ ಕೆಲವು ಸಂಭಾಷಣೆಗಳನ್ನು ಬದಲಾಯಿಸಬೇಕು. ‘ಭಾರತ್’ ಎಂಬ ಪಾತ್ರಧಾರಿಯನ್ನು ದೇಶಕ್ಕೆ ಹೋಲಿಕೆ ಮಾಡಿದಾಗ ಅದೂ ದೇಶದ ಜನರ ದೇಶಭಕ್ತಿಯ ಭಾವನೆಗಳಿಗೆ ದಕ್ಕೆ ಉಂಟುಮಾಡುತ್ತದೆ ಎಂದು ಕೂಡ ದೂರಿನಲ್ಲಿ ಹೇಳಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top