fbpx
ಸಮಾಚಾರ

ವಿಶ್ವಕಪ್ 2019- ಬೌಂಡರಿ ಬಳಿ ಮೇಲೆ ಜಿಗಿದು ಒಂದೇ ಕೈಯಲ್ಲಿ ಬೆನ್​​ ಸ್ಟೋಕ್ಸ್​​ ಹಿಡಿದ ಅದ್ಭುತ​​​​ ಕ್ಯಾಚ್ ವೈರಲ್​​.

ಐಸಿಸಿ 2019 ಏಕದಿನ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲೇ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಗಮನ ಸೆಳೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.

 

 

ಗುರುವಾರದಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ನಲ್ಲಿ ಮಿಂಚಿದ ಸ್ಟೋಕ್ಸ್ ಬಳಿಕ ಫೀಲ್ಡಿಂಗ್‌ನಲ್ಲೂ ಜಾದೂ ಮೆರೆದರು. . 35.1 ನೇ ಓವರ್​​ನಲ್ಲಿ ಆದಿಲ್​​ ರಶೀದ್​​ ಅವರ ಎಸೆತದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್​ಮನ್​​​​​ ಆ್ಯಡಿಲೆ ಪೆಹ್ಲುಕ್ವಾಯೋ ಅವರು ಚೆಂಡನ್ನು ಬೌಂಡರಿಯತ್ತ ಬೀಸಿದರು. ಈ ವೇಳೆ ಬೌಂಡರಿಯಲ್ಲಿದ್ದ ಬೆನ್​​ ಸ್ಟೋಕ್ಸ್​​​​​​​​​ ಮೇಲೆ ಜಿಗಿಯುವ ಮೂಲಕ ಒಂದೇ ಕೈಯಲ್ಲಿ ಚೆಂಡನ್ನು ಹಿಡಿದು ಆ್ಯಡಿಲೆನ್ನು ಔಟ್​ ಮಾಡಿದರು.

ಸ್ಟೋಕ್ಸ್ ಹಿಡಿದ ಅತ್ಯಾಕರ್ಷಕ ಕ್ಯಾಶ್ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದು ಸ್ಟೋಕ್ಸ್ ರನ್ನು ಕೊಂಡಾಡುತ್ತಿದ್ದಾರೆ. ಇನ್ನು ಈ ಕ್ಯಾಚ್ ಸಾಮಾಜಿಕ ಜಾಲಾಟಗಳಲ್ಲಿ ಸಕತ್ ವೈರಲ್ ಆಗಿದೆ.

ಇದಕ್ಕೂ ಮುನ್ನ ಬ್ಯಾಟಿಂಗ್‌ನಲ್ಲಿ ಮಿಂಚಿದ ಸ್ಟೋಕ್ಸ್ ಇಂಗ್ಲೆಂಡ್ ಪರ ಗರಿಷ್ಠ ರನ್ ಗಳಿಸಿದ್ದರು. 79 ಎಸೆತಗಳನ್ನು ಎದುರಿಸಿದ ಸ್ಟೋಕ್ಸ್ ಒಂಬತ್ತು ಬೌಂಡರಿಗಳಿಂದ 89 ರನ್ ಗಳಿಸಿದರು. ಈ ಮೂಲಕ ಇಂಗ್ಲೆಂಡ್ 311 ರನ್‌ಗಳ ಬೃಹತ್ ಮೊತ್ತ ಪೇರಿಸಲು ನೆರವಾದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top