fbpx
ಸಮಾಚಾರ

ಮೊದಲ ಬಾರಿಗೆ ಮುದ್ದು ಮಗಳ ಫೋಟೋ ಹಂಚಿಕೊಂಡ ಅಜೇಯ್ ರಾವ್.

ಕೃಷ್ಣಾ ಖ್ಯಾತಿಯ ನಟ ಅಜೇಯ್ ರಾವ್ ಇದೀಗ ಸಂತಸದಲ್ಲಿ ತೇಲಾಡುತ್ತಿದ್ದಾರೆ.. ನವೆಂಬರ್23 ರಂದು ಅಜಯ್ ರಾವ್ ಪತ್ನಿ ಸ್ವಪ್ನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಅಜಯ್​​ ಮುದ್ದು ಮಗಳಾದ ಚೆರಿಶ್ಮಳಿಗೆ 6 ತಿಂಗಳಾಗಿದ್ದು, ತಮ್ಮ ಮಗಳ ಫೋಟೋವನ್ನು ಅಜಯ್ ರಾವ್ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

 

 

ಮೊನ್ನೆ ಅಜಯ್​​ ಪತ್ನಿ ಹುಟ್ಟುಹಬ್ಬವಿತ್ತು, ಹಾಗಾಗಿ ಅಜಯ್​​ ಟ್ವಿಟ್ಟರ್​​ ಮೂಲಕ “ಹುಟ್ಟುಹಬ್ಬದ ಶುಭಾಶಯಗಳು ಸ್ವಪ್ನ” ಎಂದು ಪತ್ನಿಗೆ ಶುಭಾಶಯ ಕೋರಿದ್ದಾರೆ. ಇದೇ ಸಮಯದಲ್ಲಿ ಸ್ವಪ್ನ ತಮ್ಮ ಮಗಳೊಂದಿಗೆ ಕೂತಿರುವ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.. ಮುದ್ದು ಕಂದನ ವೈಟ್​​ ಆಂಡ್​​ ಪಿಂಕ್​​ ಡ್ರೆಸ್​​ ಹಾಕಿ ಕೂತಿರುವ ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ.

ಅಂದಹಾಗೆ, ಅಜಯ್ ಹಾಗೂ ಸ್ವಪ್ನ ದಂಪತಿಯ ವಿವಾಹ 2014ರ ಡಿಸೆಂಬರ್ 18 ರಂದು ಕೊಪ್ಪಳದ ದೇವಸ್ಥಾನದಲ್ಲಿ ನಡೆದಿತ್ತು. ಸ್ವಪ್ನ ಕೂಡ ಅಜಯ್ ಅವರ ಹುಟ್ಟೂರಾದ ಹೊಸಪೇಟೆಯವರೇ ಆಗಿದ್ದಾರೆ. ಇಬ್ಬರೂ ಪ್ರೀತಿ ನಂತರ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top