fbpx
ಸಮಾಚಾರ

ಮಂಡ್ಯ ಸಂಸದೆಗೆ ಸಿಗುತ್ತಾ ಕೇಂದ್ರ ಸಚಿವ ಸ್ಥಾನ? JDSಗೆ ಟಾಂಗ್ ಕೊಡ್ತಾರಾ ಮೋದಿ.

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಗೆದ್ದಿರುವ ನೂತನ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆ ಮೂಡಿದೆ. ಪಕ್ಷೇತರ ಸಂಸದೆ ಸುಮಲತಾ ಅವರಿಂದ ಮೋದಿ ಅವರು ಬಾಹ್ಯ ಬೆಂಬಲ ಪಡೆಯುತ್ತಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸುಮಲತಾ ಅವರಿಗೆ ಸಚಿವ ಸ್ಥಾನ ಕೊಡುವ ಯೋಚನೆ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳಿದ್ದು, ಸುಮಲತಾ ಮಂತ್ರಿ ಮಾಡುವುದರ ಮೂಲಕ ದೇವೇಗೌಡರಿಗೆ ಟಾಂಗ್ ಕೊಡುವ ಲೆಕ್ಕಾಚಾರವನ್ನು ಮೋದಿ ಮತ್ತು ಅಮಿತ್ ಷಾ ಮಾಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಸುಮಲತಾರಿಗೆ ಸಚಿವ ಸ್ಥಾನ ಕೊಟ್ಟರೇ ಜೆಡಿಎಸ್ ಪ್ರಭಾವ ಕಡಿಮೆ ಮಾಡುವ ತಂತ್ರ ರೂಪಿಸಿದ್ದಾರೆ. ಸುಮಲತಾ ಅವರಿಗೆ ಮಂತ್ರಿ ಸ್ಥಾನ ಕೊಟ್ಟರೆ ಬಿಜೆಪಿ ಮೇಲೆ ಅನುಕಂಪದಿಂದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಜನತೆ ಸಂಪೂರ್ಟ್ ಮಾಡುತ್ತಾರೆ ಎಂಬುದು ಮೋದಿ ಅವರ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.

ಮಂಡ್ಯ, ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಭಾವ ಅಧಿಕವಾಗಿದೆ. ಹೀಗಾಗಿ ಅಲ್ಲಿ ಜೆಡಿಎಸ್‍ನ ಪ್ರಭಾವನ್ನು ಕುಗ್ಗಿಸಲು ಮತ್ತು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿ ಹೆಚ್ಚಿಸುವ ಮೋದಿ ಈ ರೀತಿ ಯೋಚನೆ ಮಾಡಿದ್ದಾರೆ. ಎಂದು ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top