fbpx
ಸಮಾಚಾರ

ಮಂಡ್ಯ ವಿಜಯೋತ್ಸವ ಕಾರ್ಯಕ್ರಮದಲ್ಲಿ ದರ್ಶನ್ ಹೇಳಿದ್ದೇನು ಗೊತ್ತಾ?

ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಚಿತ್ರನಟಿ ಸುಮಲತಾ ಅಂಬರೀಷ್‌ ಜನರಿಗೆ ಧನ್ಯವಾದ ಹೇಳಲು ‘ರೆಬಲ್‌ಸ್ಟಾರ್‌’ ಅಂಬರೀಷ್‌ ಅವರ ಹುಟ್ಟುಹಬ್ಬದ ದಿನವಾದ ಬುಧವಾರ (ಮೇ 29) ಮಂಡ್ಯದಲ್ಲಿ ಕೃತಜ್ಞತಾ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಡಿ ಬಾಸ್‌ ದರ್ಶನ್‌ ಮನಬಿಚ್ಚಿ ಮಾತನಾಡಿದರು.

ಅಂಬರೀಶ್ ಅವರ ಹುಟ್ಟುಹಬ್ಬ ಇಂದು ಆದರೆ ಇಂದು ಅವರಿಗೆ ಶುಭಾಶಯ ಹೇಳುವುದಿಲ್ಲ, ಹಣ ವೋ ಸ್ವಾಭಿಮಾನವೋ ಎಂಬ ಆಯ್ಕೆ ಬಂದಾಗ ಸ್ವಾಭಿಮಾನವನ್ನು ಆಯ್ಕೆ ಮಾಡಿದ ನಿಮ್ಮ ಹುಟ್ಟುಹಬ್ಬ ಇಂದು ಎಂದು ಮಂಡ್ಯದ ಜನರಿಗೆ ಶುಭಾಶಯಗಳನ್ನು ದರ್ಶನ್ ಹೇಳಿದರು. “ದೊಡ್ಡ ಪಕ್ಷಗಳನ್ನು, ದೊಡ್ಡ ವ್ಯಕ್ತಿಗಳನ್ನು ಎದುರುಹಾಕಿಕೊಂಡು ನಾವು, ನಿವೆಲ್ಲಾ ಚುನಾವಣೆ ನಡೆಸಿದ್ದೇವೆ. ಆದರೆ ಆಗೆಲ್ಲಾ ಏನೇನಾಯಿತೊ ಎಲ್ಲವನ್ನೂ ಮರೆತುಬಿಡೋಣ, ಜಗಳ ನಮಗೆ ಬೇಡಾ ಎಂದು ಎಲ್ಲರೂ ಒಟ್ಟಾಗಿ ಇರೋಣ” ಎಂದು ದರ್ಶನ ಹೇಳಿದರು.

ಸುಮಮ್ಮ ಹುಟ್ಟಿ ಕೇವಲ 5 ದಿನ ಆಗಿದೆ. ಮೇ23 ರಂದು ಅವ್ರು ಹುಟ್ಟಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿ‌ ಜಿಲ್ಲೆಯ ಅಭಿವೃದ್ಧಿಗೆ ಪಣತೊಡಲಿದ್ದಾರೆ. ಒಂದು ವೇಳೆ ನಾವು ಈ ಚುನಾವಣೆ ಹಬ್ಬದಲ್ಲಿ ಸೋಲು ಕಂಡಿದ್ದರೆ ನಮ್ಮ ಪರಿಸ್ಥಿತಿ ಬಹಳ ಕಷ್ಟವಾಗುತಿತ್ತು. ಸುಮಲತಾ ಅಮ್ಮನಿಗೆ ಸಹಕಾರ, ಬೆಂಬಲ ಕೊಟ್ಟಿದ್ದೀರ. ಮಂಡ್ಯದಲ್ಲಿ ನಿಂತು ಮಾತನಾಡುವ ಯೋಗ್ಯತೆ ಕೊಟ್ಟಿದ್ದೀರಿ. ಇಲ್ಲಿಯೇ ನಿಂತು ನಿಮ್ಮ ಪಾದಗಳಿಗೆ ನಮಸ್ಕರಿಸುತ್ತೇನೆ ಎಂದು ಬಾಗಿ ವೇದಿಕೆಗೆ ನಮಸ್ಕರಿಸಿದರು.

ಇದೆ ವೇಳೆ ಮೇ 31ಕ್ಕೆ ನನ್ನ ತಮ್ಮ ಅಭಿ ಸಿನಿಮಾ ಚಿತ್ರ ಬಿಡುಗಡೆ ಆಗ್ತಿದೆ. ಎಲ್ಲರೂ ಅವನನ್ನ ಹರಸಿ ಹಾರೈಸಿ. ಅಂಬರೀಶ್ ಅಣ್ಣನಿಗೆ ಕೊಟ್ಟ ಪ್ರೀತಿಗಿಂತ ಹೆಚ್ಚಿಗೆ ಪ್ರೀತಿ ಇವನಿಗೆ ಕೊಡಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಮನವಿ ಮಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top