fbpx
ಸಮಾಚಾರ

ಕುಮಾರಸ್ವಾಮಿ ಯಾವಾಗಲೂ ಅಳುವುದರಲ್ಲಿ ಇರುತ್ತಾರೆ” ಅನುಪಮಾ ಶೆಣೈ ವ್ಯಂಗ್ಯ

ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರು ಯಾವಾಗಲೂ ಅಳುವುದರಲ್ಲೇ ಇರುತ್ತಾರೆ ಎಂದು ಮಾಜಿ ಪೊಲೀಸ್​ ಅಧಿಕಾರಿ ಅನುಪಮಾ ಶಣೈ ಅವರು ವ್ಯಂಗ್ಯವಾಡಿದ್ದಾರೆ.

ಗುರುವಾರ ತುಂಗಭದ್ರ ಅಣೆಕಟ್ಟಿನ ಹೂಳಿನ ಜಾತ್ರೆಯಲ್ಲಿ ಭಾಗಿಯಾಗಿದ್ದ ಅನುಪಮಾ ಶೆಣೈ ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ “ಮುಖ್ಯಮಂತ್ರಿ ಕುಮಾರಸ್ವಾಮಿ ಸದಾ ಅಳುವುದರಲ್ಲೇ ಇರುತ್ತಾರೆ. ಮೊದಲು ಮಗ ನಿಖಿಲ್ ನನ್ನು ಗೆಲ್ಲಿಸಬೇಕೆಂದು ಅಳುತ್ತಿದ್ದರು. ಈಗ ಮಗ ಸೋತ ಎಂದು ಅಳುತ್ತಿದ್ದಾರೆ. ರೈತರ ಸಮಸ್ಯೆಗಳು ಅವರಿಗೆ ಗೊತ್ತಾಗುವುದೇ ಇಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತುಂಗಭದ್ರಾ ಅಣೆಕಟ್ಟಿನ ಹೂಳು ತೆಗೆಸಲು ರಾಜಕಾರಣಗಳಿಗೆ ಇಚ್ಚಾ ಶಕ್ತಿ ಕೊರತೆ ಇದೆ. ಹೀಗಾಗಿ ರೈತರೇ ಒಟ್ಟಾಗಿ ಹೂಳು ತೆಗೆಸಲು ಮುಂದಾಗಿದ್ದಾರೆ.. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಅಣೆಕಟ್ಟಿನ ಹೂಳು ತೆಗೆಸಿ ರೈತರಿಗೆ ಆಗುವ ಅನ್ಯಾಯವನ್ನು ಸರಿಪಡಿಸಿ, ರೈತರಿಗೆ ನೆರವಾಗಲಿ ಎಂದು ಅನುಪಮಾ ಶೆಣೈ ಒತ್ತಾಯ ಮಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top