fbpx
ಸಮಾಚಾರ

ಅಣ್ಣಾಮಲೈ ರಾಜಿನಾಮೆಗೆ ಬೇಸರ ವ್ಯಕ್ತಪಡಿಸಿದ ನಟ ಸತೀಶ್ ನೀನಾಸಂ.

ದಕ್ಷ ಅಧಿಕಾರಿ ಎಂದು ಖ್ಯಾತರಾಗಿದ್ದ ಅಣ್ಣಾಮಲೈ ಐಪಿಎಸ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.. ಇದರಿಂದ ಸಾಕಷ್ಟು ಯುವಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ನಟ ಸತೀಶ್ ನೀನಾಸಂ ಕೂಡ ಅಣ್ಣಾಮಲೈ ರಾಜೀನಾಮೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

 

 

ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿರುವ ನಟ ಸತೀಶ್ “ನಿಮ್ಮ ಸೇವೆ ಬರೀ ಕರ್ನಾಟಕವಲ್ಲ, ದೇಶಕ್ಕೆ ಅವಶ್ಯಕತೆಯಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಕರ್ನಾಟಕ ಕಂಡ ಒಬ್ಬ ನಿಷ್ಟಾವಂತ ಅಧಿಕಾರಿ ಅಣ್ಣಾಮಲೈ ರಾಜೀನಾಮೆ ನೀಡಿರುವುದು ಒಬ್ಬ ಪ್ರಜೆಯಾಗಿ ಬೇಸರವಾಗಿದೆ. ನಿಮ್ಮಂತಹ ಅಧಿಕಾರಿಗಳ ಸೇವೆ ಬರೀ ಕರ್ನಾಟಕವಲ್ಲ ದೇಶಕ್ಕೆ ಅವಶ್ಯಕತೆಯಿದೆ. ಆದರೂ ನಿಮ್ಮ ವೈಯಕ್ತಿಕ ನಿರ್ಧಾರಗಳು ಅಷ್ಟೇ ಮುಖ್ಯ. ನಿಮ್ಮ ಜೀವನ ಸುಖವಾಗಿರಲಿ, ಶುಭಾಶಯಗಳು ಥ್ಯಾಂಕ್ಯು ಸರ್” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top