fbpx
ಸಮಾಚಾರ

ಕಲಿಯುಗದ ದೈವ ಹನುಮಂತನು ಬ್ರಹ್ಮಚಾರಿಯಲ್ಲ, ಅವನ ಹೆಂಡ್ತಿ ಪರಿಚಯ ಮಾಡ್ಕೊಡ್ತೀವಿ ಬನ್ನಿ , ಇವರಿಗೆ ಪೂಜೆ ಮಾಡಿದ್ರೆ ಹೊಸದಾಗಿ ಮದುವೆ ಆದೋರು ತುಂಬಾ ಖುಷಿಯಾಗಿ ಇರ್ತಾರೆ .

ಕಲಿಯುಗದ ದೈವನಾದ ಹನುಮಂತನು ಬ್ರಹ್ಮಚಾರಿಯಲ್ಲ,ಅವನು ಸಹ ಮದುವೆಯಾಗಿದ್ದನು,ಅವನಿಗೂ ಪತ್ನಿಯಿದ್ದಾಳೆ ಎನ್ನುವುದು ನಿಮಗೆ ಗೊತ್ತೇ ? ಇವರಿಗೆ ಪೂಜೆ ಸಲ್ಲಿಸಿದರೆ ಅವರು ನಮ್ಮ ವಿವಾಹಿತ ಜೀವನವನ್ನು ಸಂತೋಷದಿಂದ ಇಡುವರು.ಹನುಮಂತ ದೇವನನ್ನು ಬ್ರಹ್ಮಚಾರಿ ಎಂದು ಪರಿಗಣಿಸಲಾಗಿದೆ. ಆದರೆ ಇವರಿಗೆ ಹೆಂಡತಿ ಅಥವಾ ಮಗನ ತಂದೆಯಾಗಿರುವ ವಿಷಯ ಅಷ್ಟಾಗಿ ಯಾರಿಗೂ ತಿಳಿದಿಲ್ಲ.ಆದರೂ ಈ ವಿಷಯ ಸುದ್ದಿಯಲ್ಲಿದೆ.

 

 

ಈ ಕಥೆಯಲ್ಲಿ ಹನುಮಂತನ ಮಗ ಮಕರದ್ವಜನು ಮಗನ ಸಮಾನನಾಗಿದ್ದು .ಹನುಮಂತನ ಪತ್ನಿಯ ಬಗ್ಗೆಯೂ ಕೆಲವೇ ಕೆಲವರಿಗೆ ಮಾತ್ರ ಈ ವಿಷಯ ಗೊತ್ತು.(ಮಕರದ್ವಜ ಎಂಬ ಮಗನು ಹುಟ್ಟಿದ್ದು ಒಂದು ಮೀನಿನಿಂದ. ಆ ಮೀನು ಹನುಮಂತನ ಒಂದು ಹನಿ ದೇಹದ ಬೆವರಿನ ನೀರಿನ ಹನಿಯನ್ನು ನುಂಗಿತ್ತು.ಹನುಮಂತನು ಲಂಕಾಸಮುದ್ರದಲ್ಲಿ ಲಂಕೆಯನ್ನು ಸಂಪೂರ್ಣವಾಗಿ ಸುಟ್ಟ ಮೇಲೆ ಆ ಜ್ವಾಲೆಯಿಂದ ಹನುಮಂತ ದೇವನಿಗೆ ಬೆವರು ಹರಿಯ ತೊಡಗಿತು).ಆದ್ದರಿಂದ ಈ ಪತ್ನಿ ಎಲ್ಲಿಂದ ಬಂದಳು.ಅವಳು ಯಾರು ? ಪರಶರಾ ಸಂಹಿತ ಎನ್ನುವ ಒಂದು ಲಿಖಿತ ಗ್ರಂಥದಲ್ಲಿ ಈ ಹನುಮಂತನ ಪತ್ನಿಯ ಕಥೆಯು ಉಲ್ಲೇಖವಾಗಿದೆ.

ಹನುಮಂತ ದೇವನ ಪತ್ನಿಯ ಹೆಸರು ಸುವರ್ಚಲಾ ದೇವಿ:ಮಹರ್ಷಿ ಪರಶರರ ಪ್ರಕಾರ ಹನುಮಂತನು ತನ್ನ ಗುರುವಾದ ಸೂರ್ಯ ದೇವನನ್ನು ಪೂಜಿಸುತ್ತಿದ್ದನು.ತನ್ನ ಗುರುಗಳಿಂದಲೇ ವೇದಗಳನ್ನು ಕಲಿತನು ಪಾಂಡಿತ್ಯ ಹೊಂದಿದನು ಆದರೂ ಸಹ ಅವನು ಒಂದು ಮುಖ್ಯವಾದ ಧರ್ಮ ಗ್ರಂಥದ ಪ್ರಕಾರ ಹನುಮಂತನಿಗೆ ಒಂದು ವಿದ್ಯೆಯನ್ನು ಕಲಿಯಲು ಅರ್ಹತೆ ಇರಲಿಲ್ಲ.ಅದು ನವ ವ್ಯಾಕರಣ ಅಥವಾ ಒಂಬತ್ತು ಕಾಗುಣಿತಗಳು ಯಾಕೆಂದರೆ ಅದನ್ನು ಕಲಿತುಕೊಳ್ಳಲು ಮದುವೆಯಾದವರಿಗೆ ಮಾತ್ರ ಅಥವಾ ಸಂಸಾರಸ್ಥರಿಗೆ ಮಾತ್ರ ಅರ್ಹತೆ ಇತ್ತು.

ಸೂರ್ಯ ದೇವನು ಮತ್ತು ಹನುಮಂತ ದೇವನು ಇಬ್ಬರು ಗುರು ಶಿಷ್ಯರಾಗಿದ್ದರು:ಹನುಮಂತ ದೇವನು ತನ್ನ ಶಿಕ್ಷಣ ಮತ್ತು ವಿದ್ಯಾಭ್ಯಾಸವನ್ನು ಸಂಪೂರ್ಣಗೊಳಿಸುವ ಉದ್ದೇಶದಿಂದ ತ್ರಿಮೂರ್ತಿಗಳಾದ ಬ್ರಹ್ಮ,ವಿಷ್ಣು,ಮಹೇಶ್ವರರು ಸೂರ್ಯನನ್ನು ಪ್ರಚೋದಿಸಿದರು.ಆಗ ಸೂರ್ಯ ದೇವನು ಒಂದು ಸುಂದರವಾದ ಹುಡುಗಿಯನ್ನು ಸೃಷ್ಟಿಸಿದರು ಅವಳ ಹೆಸರು ಸುವರ್ಚಲಾ ದೇವಿ ಸೂರ್ಯನ ಕಿರಣಗಳಿಂದ ಮತ್ತು ಬೆಳಕಿನಿಂದ ಜನಿಸಿದವಳು.

ಹನುಮ ದೇವನು ಪತಿ ಪತ್ನಿ ಸಮೇತರಾಗಿ ಇರುವ ಸುವರ್ಚಲಾ ದೇವಿ ದೇವಸ್ಥಾನ, ಆಂಧ್ರ ಪ್ರದೇಶ ರಾಜ್ಯದ ತೆಲಂಗಾಣ ಜಿಲ್ಲೆಯಲ್ಲಿದೆ.

 

 

ಸುವರ್ಚಲಾ ದೇವಿಯು ಆಯೋನಿಜೆಯಾಗಿದ್ದಳು. ಅಯೋನಿಜೆ ಅಂದರೆ ಯೋನಿಯಿಂದ ಹುಟ್ಟಿದವಳಲಾಗಿರಲಿಲ್ಲ.ಅವಳ ಮದುವೆಯೂ ಹನುಮಂತ ದೇವನ ಜೊತೆ ನಿಶ್ಚಯವಾಗಿತ್ತು.ಯಾರು ಮದುವೆಯಾಗಿರುತ್ತಾರೋ ಅವರಿಗೆ ಸಂಸಾರದ ಕರ್ತವ್ಯಗಳನ್ನು ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಾದ ಹೊಣೆ ಅವರಿಗಿರುವುದು.ಆದರೆ ಹನುಮಂತನಿಗೆ ಮದುವೆಮಾಡಿದ್ದು ಗೃಹಸ್ತನನ್ನಾಗಿ ಮಾಡಲು ಅಲ್ಲ ಬದಲಾಗಿ ಒಂದು ವಿದ್ಯಾಬ್ಯಾಸಕ್ಕಾಗಿ. ಆದರೆ ಹನುಮಂತನನ್ನು ವಿವಾಹಕ್ಕೆ ಒಪ್ಪಿಸಲು ಅಷ್ಟು ಸುಲಭವಾಗಿರಲಿಲ್ಲ.ಈ ಪುರಾತನ ದೇವಸ್ಥಾನ ದಕ್ಷಿಣ ಭಾರತದ ಅಂದ್ರ ಪ್ರದೇಶ ರಾಜ್ಯದಲ್ಲಿದ್ದು.ಹೈದರಾಬಾದ್ ನಗರದಿಂದ 220 ಕಿಲೋಮೀಟರ್ ದೂರದ ತೆಲಂಗಾಣ ರಾಜ್ಯದಲ್ಲಿದೆ.ಇಲ್ಲಿಗೆ ಯಾರು ಬಂದು ಪೂಜಿಸಿದರೂ ಸಹ ಮದುವೆಗೆ ತೊಂದರೆಗಳನ್ನು ಹೊಂದಿರುವವರು ಇಂದಿಗೂ ಸಹ ಅವರ ವೈವಾಹಿಕ ಜೀವನದಲ್ಲಿ ತೊಂದರೆಗಳನ್ನು ಎದುರಿಸುವುದಿಲ್ಲ ಎಂದು ನಂಬಲಾಗಿದೆ.

ಹನುಮಂತನು ಬ್ರಹ್ಮಚಾರಿಯಾಗಿಯೇ ಇರುವುದಾಗಿ ಪ್ರತಿಜ್ಞೆ ಮಾಡಿದ್ದನು:ಈ ರೀತಿಯ ಒಂದು ಸಂಬಂಧ ಬಂದ ತಕ್ಷಣವೇ ಹನುಮಾನ್ ದೇವನು ಗೊಂದಲಕ್ಕೆ ಒಳಗಾದನು ಆದರೆ ಅವನು ನಿರಾಕರಿಸಿದನು ನಂತರ ಸೂರ್ಯದೇವನು ಹನುಮಂತನನ್ನು ಗುರು ದಕ್ಷಿಣೆಯಾಗಿ ಸುವರ್ಚಲಾ ದೇವಿಯನ್ನು ಮದುವೆಯಾಗು ಎಂದು ಕೇಳಿಕೊಂಡನು.ಸೂರ್ಯ ದೇವನು ಹನುಮಂತ ದೇವರಿಗೆ ಈ ರೀತಿ ವಿವರಿಸಿದ್ದನು ಸುವರ್ಚಲಾ ದೇವಿ ಇನ್ನೂ ಕನ್ಯೆಯಾಗಿದ್ದು, ನಾನು ನಿನಗೆ ವರವನ್ನು ನೀಡುತ್ತಿದ್ದೇನೆ ನೀನು ಮದುವೆಯಾದರೂ ಸಹ ಬ್ರಹ್ಮಚಾರಿಯಾಗಿಯೇ ಉಳಿಯುವೆ. ನಿನ್ನ ಮದುವೆ ಈ ವಿಶ್ವದ ಒಳಿತಿಗಾಗಿ ಮಾತ್ರ ಮತ್ತು ಈ ವಿವಾಹದಿಂದ ನಿನ್ನ ಮೇಲೆ ಯಾವುದೇ ಪರಿಣಾಮವೂ ಸಹ ಬೀರುವುದಿಲ್ಲ ನೀನು ಬ್ರಹ್ಮಚರ್ಯವನ್ನೇ ಪಾಲಿಸಬಹುದು.

ಸುವರ್ಚಲಾ ದೇವಿಯು ಸೂರ್ಯನ ಮಗಳು :ಹನುಮಂತನನ್ನು ಮದುವೆಯಾಗಲು ಬಂದಳು. ಹನುಮಂತನಿಗೆ ಮದುವೆಯಾದ ಮೇಲೆ ಅವಳು ತಕ್ಷಣ ತಪ್ಪಸ್ಸಿಗೆ ಕುಳಿತುಕೊಂಡಳು ಅವಳನ್ನು ಸುವರ್ಚಲಾ ದೇವಿಯೆಂದೇ ದಕ್ಷಿಣ ಭಾರತದಲ್ಲಿ ಪೂಜಿಸಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top