fbpx
ಸಮಾಚಾರ

ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಸರ್ವ ಧರ್ಮ ಸಮನ್ವಯ ಸಾರಿದ ದರ್ಶನ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇಂದು ತಮ್ಮ ಗೆಳೆಯರಾದ ಇಫ್ತೆಕರ್ ರವರು ರಂಜಾನ್ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ಧಾರ್ಮಿಕ ವೈಷಮ್ಯ ಬಿಟ್ಟು ಸರ್ವ ಧರ್ಮ ಸಮನ್ವಯ ತತ್ವದ ರೀತಿ ಬಾಳಬೇಕು ಎಂದು ಸಾರಿದ್ದಾರೆ..

ದರ್ಶನ್ ಅವರು ಇಫ್ತಾರ್ ಕೂಟದಲ್ಲಿ ಭಾಗವಹಿಸಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅವರ ಅಭಿಮಾನಿಗಳು ನೆಚ್ಚಿನ ನಟನ ನಡೆಗೆ ಮೆಚ್ಚುಗೆ ಸೂಚಿಸಿ ತಮ್ಮ ಖಾತೆಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

 

ಏನಿದು ಇಫ್ತಾರ್ ಕೂಟ:
ರಂಜಾನ್ ಮಾಸದಲ್ಲಿ ಬೆಳಿಗ್ಗೆ ಸೂರ್ಯೋದಯಕ್ಕೆ ಮೊದಲು ಆಹಾರಸೇವನೆ(ಸಹ್ರಿ) ಮುಗಿಸಿ ದಿನವಿಡೀ ಒಂದು ಗುಟುಕು ನೀರನ್ನೂ ಸೇವಿಸದೆ, ಎಲ್ಲಾ ರೀತಿಯ ಮನರಂಜನೆಯನ್ನು ತ್ಯಜಿಸಿ ಸೂರ್ಯಾಸ್ತದ ಬಳಿಕ ಆಹಾರ ಸೇವಿಸುವುದು(ಇಫ್ತಾರ್) ಇಸ್ಲಾಮಿನ ಉಪವಾಸದ ವಿಧಾನ. ಇದೊಂದು ಆಚರಣೆ ಎನ್ನುವುದಕ್ಕಿಂತ ಆರಾಧನೆಯಾಗಿದೆ. ಒಂದು ತಿಂಗಳ ಉಪವಾಸ ವರ್ಷದ ಉಳಿದ ತಿಂಗಳುಗಳ ಜೀವನಕ್ಕೆ ಸ್ಫೂರ್ತಿ ತುಂಬಬಲ್ಲದು ಎಂಬುದು ಅವರ ನಂಬಿಕೆಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top