fbpx
ಸಮಾಚಾರ

ಅಂಬರೀಶ್ ಕುರಿತು ಆತ್ಮೀಯ ಟ್ವೀಟ್ ಮಾಡಿದ ಸಿಎಂ ಕುಮಾರಸ್ವಾಮಿ.

ಇಂದು ದಿವಂಗತ ರೆಬಲ್ ಸ್ಟಾರ್ ಅಂಬರೀಷ್ ಅವರ 67ನೇ ಜನ್ಮ ದಿನ. ಈ ಹಂಗವಾಗಿ ಕಂಠೀರವ ಸ್ಟುಡಿಯೋದಲ್ಲಿನ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಲಾಗಿದೆ. ಹಾಗೆಯೇ ಅಂಬರೀಷ್​ ಅಭಿಮಾನಿಗಳು ಅವರ ನೆನಪಿನಲ್ಲಿ ಸಿಹಿ ಹಂಚಿಕೆ, ರಕ್ತದಾನದಂತಹ ಕಾರ್ಯಕ್ರಮಗಳನ್ನು ನಡೆಸಿ ಅಂಬರೀಷ್​ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ.

ರೆಬಲ್​ಸ್ಟಾರ್​ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅನೇಕ ಗಣ್ಯರು ಕರ್ಣನನ್ನು ನೆನಪಿಸಿಕೊಂಡಿದ್ದು, ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರು ಸಹ ತಮ್ಮ ಗೆಳೆಯನನ್ನು ನೆನೆದು ಟ್ವೀಟ್​ ಮಾಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಅಂಬರೀಶ್ ಅವರನ್ನು ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ನೆನಪಿಸಿಕೊಂಡಿರುವ ಕುಮಾರಸ್ವಾಮಿ, ‘ಅಂಬರೀಷ್ ಹಾಗೂ ನನ್ನ ಸ್ನೇಹ ಮರೆಯಲಾಗದಂತಹದ್ದು. ಸದಾ ಜನರ ಜೊತೆ ಬೆರೆತ, ಸಮುದಾಯದ ಏಳಿಗೆಯ ಬಗ್ಗೆ ಚಿಂತಿಸಿದ ಗೆಳೆಯನ ಜನ್ಮ ದಿನ ಇಂದು’ ಎಂದು ಹೇಳಿದ್ದಾರೆ. ಮುಂದುವರೆದು, ‘ಅಂಬರೀಷ್ ಅವರ ಉದಾತ್ತ ಮನಸ್ಸು ಎಲ್ಲರಿಗೂ ದಕ್ಕಲಿ ಎಂದು ಹಾರೈಸುತ್ತೇನೆ’ ಎಂದು ಸಹ ಕುಮಾರಸ್ವಾಮಿ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top