fbpx
ಸಮಾಚಾರ

ವಿಶ್ವಕಪ್‌ ಮಹಾಸಮರ: ಇಂಗ್ಲೆಂಡ್‌ಗೆ ಹಾರಿದ ಕೊಹ್ಲಿ ಪಡೆ.

ಮುಂಬರುವ ಐಸಿಸಿ ಏಕದಿನ 2019 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾ ರಣೋತ್ಸಾಹದೊಂದಿಗೆ ಇಂಗ್ಲೆಂಡ್ ಪರ್ಯಟನೆಯನ್ನು ಆರಂಭಿಸಿದೆ. ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ ಇಂದು ಬೆಳಗ್ಗೆ ಇಂಗ್ಲೆಂಡ್‌ಗೆ ತೆರಳಿತು.

ಇಂದು ಬೆಳಗ್ಗೆ ಸಾಂತಾ ಕ್ರೂಜ್‌ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆ ಆಗಮಿಸಿದ ನಾಯಕ ವಿರಾಟ್‌ ಕೊಹ್ಲಿ, ಎಂ.ಎಸ್‌.ಧೋನಿ, ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಕೆ.ಎಲ್‌ ರಾಹುಲ್‌ ಸೇರಿದಂತೆ ಭಾರತ ತಂಡದ ಎಲ್ಲ ಸದಸ್ಯರು ಅಧಿಕೃತ ಪೋಷಾಕಿನಲ್ಲಿ ಮಿಂಚುತ್ತಿದ್ದರು. ನಂತರ, ಕೆಲಕಾಲ ವಿಮಾನ ನಿಲ್ದಾಣದ ನಿರೀಕ್ಷಣಾ ಕೊಠಡಿಯಲ್ಲಿ ತಂಗಿದ್ದು, ನಂತರ ಲಂಡನ್‌ಗೆ ತೆರಳಿದರು.

ಅಂದಹಾಗೆ ಟೀಮ್‌ ಇಂಡಿಯಾ ಜೂನ್‌ 5ರಂದು ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಪಂದ್ಯದೊಂದಿಗೆ ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ. ಅದಕ್ಕೂ ಮೊದಲು ನ್ಯೂಜಿಲೆಂಡ್‌ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡುವ ಕಾರ್ಯಕ್ರಮವಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top