fbpx
ಸಮಾಚಾರ

ಅಂಬರೀಷ್ ಕನಸಿನ ಮನೆಗೆ ಸುಮಲತಾ ಗೃಹಪ್ರವೇಶ.

ದಿವಂಗತ ನಟ ಅಂಬರೀಶ್ ಅವರ ಕನಸಿನ ಮನೆಯ ಗೃಹ ಪ್ರವೇಶವನ್ನು ಪತ್ನಿ ಸುಮಲತಾ ಅಂಬರೀಶ್ ಮತ್ತು ಪುತ್ರ ಅಭಿಷೇಕ್ ಅವರು ಸರಳವಾಗಿ ಶುಕ್ರವಾರ ನೆರವೇರಿಸಿದ್ದಾರೆ. ಗೃಹ ಪ್ರವೇಶವನ್ನು ಸರಳವಾಗಿ ಮಾಡಿದ್ದು, ಆಪ್ತರು, ಕುಟುಂಬದ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು.

ಬೆಂಗಳೂರಿನ ಜೆಪಿ ನಗರದ ರೆಬೆಲ್ ಸ್ಟಾರ್ ಅಂಬರೀಶ್ ನಿವಾಸಕ್ಕೆ ಗೃಹ ಪ್ರವೇಶ ಮಾಡಿ ಸುಮಲತಾ ಮತ್ತು ಅಭಿಷೇಕ್ ಹೋಗಿದ್ದಾರೆ. ಅಂಬರೀಶ್ ಅವರು ಬದುಕಿದ್ದಾಗ ಈ ಮನೆಯನ್ನ ಕೆಡವಿ ನವೀಕರಣ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದರು. ಸುಮಾರು ಮೂರ್ನಾಲ್ಕು ವರ್ಷದಿಂದ ಇಲ್ಲಿ ನವೀಕರಣ ಕೆಲಸ ನಡೆಯುತ್ತಿತ್ತು.

ಬೆಂಗಳೂರಿನ ಜೆಪಿ ನಗರದಲ್ಲಿರುವ ರೆಬೆಲ್ ಸ್ಟಾರ್ ಅಂಬರೀಶ್ ನಿವಾಸವನ್ನು ಅಂಬರೀಶ್ ಅವರು ಬದುಕಿದ್ದ ವೇಳೆಯಲ್ಲಿ ಈ ಮನೆಯನ್ನ ಕೆಡವಿ ಹೊಸ ಜಮಾನಕ್ಕೆ ತಕ್ಕಂತೆ ಹಾಗೂ ತಮ್ಮ ಮಗನಿಗೆ ಇಷ್ಟವಾಗುವ ರೀತಿಯಲ್ಲಿ ನವೀಕರಣ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದರು. ಸುಮಾರು ಮೂರ್ನಾಲ್ಕು ವರ್ಷದಿಂದ ಇಲ್ಲಿ ನವೀಕರಣ ಕೆಲಸ ನಡೆಯುತ್ತಿತ್ತು. ಇನ್ನೂ ಸ್ವಲ್ಪ ಕೆಲಸ ಬಾಕಿ ಉಳಿದಿದೆಯಂತೆ. ಸದ್ಯ ಶುಕ್ರವಾರ ಒಳ್ಳೆಯ ವಾರ ಎಂದು ಕಾರಣಕ್ಕೆ ಪೂಜೆ ಸಲ್ಲಿಸಿ ಹೊಸಮನೆಗೆ ಹೋಗಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top