fbpx
ಸಮಾಚಾರ

ಉಪ್ಪಿ ಪಾಲಿನ ವಿಲನ್ ಆದ ಡೆಡ್ಲಿ ಆದಿತ್ಯ

‘ರಿಯಲ್ ಸ್ಟಾರ್’ ಉಪೇಂದ್ರ ಅಭಿನಯದ ‘ಐ ಲವ್ ಯೂ’ ಸಿನಿಮಾ ಜೂನ್ 14ರಂದು ದ್ವಿಭಾಷೆಯಲ್ಲಿ ತೆರೆಕಾಣುವುದಕ್ಕೆ ಸಜ್ಜಾಗಿದೆ. ಅದರ ಜತೆಗೆ ಅವರ ಮತ್ತೊಂದು ಸಿನಿಮಾ ಕುರಿತು ಭರ್ಜರಿ ಸುದ್ದಿಯೊಂದು ಕೇಳಿಬಂದಿದೆ. ‘ಚಮಕ್’, ‘ಅಯೋಗ್ಯ’ ಖ್ಯಾತಿಯ ನಿರ್ವಪಕ ಟಿ.ಆರ್. ಚಂದ್ರಶೇಖರ್ ನಿರ್ವಣದ ಹೊಸ ಸಿನಿಮಾದಲ್ಲಿ ಉಪೇಂದ್ರ ನಟಿಸುತ್ತಿದ್ದು ಈ ಸಿನಿಮಾದಲ್ಲಿ ನಟ ಆದಿತ್ಯ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಈ ಚಿತ್ರದಲ್ಲಿ ಉಪ್ಪಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದು ಇದೊಂದು ಮಾಸ್ ಶೈಲಿಯ ಸಿನಿಮಾವಾಗಿದ್ದು ಚಿತ್ರದಲ್ಲಿ ಉಪ್ಪಿ ಎದುರಾಗಿ ಆದಿತ್ಯ ತೊಡೆತಟ್ಟಲಿದ್ದಾರೆ. ಉಪೇಂದ್ರ ಮತ್ತೆ ಬಾ, ಹಾಲಿವುಡ್, ಗಾಡ್ ಫಾದರ್ ಚಿತ್ರಗಳಲ್ಲಿ ದ್ವಿಪಾತ್ರಗಳಲ್ಲಿ ಮಿಂಚಿದ್ದ ಉಪ್ಪಿ ಮತ್ತೊಮ್ಮೆ ಡಬಲ್ ಗೆಟಪ್​ನಲ್ಲಿ ಕಮಾಲ್ ಮಾಡೋಕೆ ರೆಡಿಯಾಗ್ತಿದ್ದಾರೆ. ಇನ್ನು ಚಿತ್ರಕ್ಕೆ ನಾಯಕಿಯಾಗಿ ಸೋನಾಲ್ ಮಾಂತೇರಿಯಾ ಜೊತೆಯಾಗಲಿದ್ದಾರೆ ಅಂತಾ ಹೇಳಲಾಗ್ತಿದ್ದು ನವ ನಿರ್ದೇಶಕ ಮೌರ್ಯ ನಿರ್ದೇಶನವಿದೆ.

ಈ ಚಿತ್ರಕ್ಕೆ ಟೈಟಲ್‌ ಇನ್ನೂ ಫೈನಲ್‌ ಆಗಿಲ್ಲ. ಮೇ 24 ರಿಂದ ಚಿತ್ರಕ್ಕೆ ಅಧಿಕೃತವಾಗಿ ಚಿತ್ರೀಕರಣ ಶುರು ಎನ್ನಲಾಗಿದೆ. ಈ ಹಂತದಲ್ಲೀಗ ಚಿತ್ರ ತಂಡವು ಬಾಕಿ ಉಳಿದ ಕಲಾವಿದರ ಆಯ್ಕೆಯಲ್ಲಿ ಬ್ಯುಸಿ ಆಗಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top