fbpx
ಸಮಾಚಾರ

ರಕ್ತ ಚಿಮ್ಮುತ್ತಿದ್ದರೂ ತಂಡಕ್ಕಾಗಿ ಆಡಿದ್ದ ವ್ಯಾಟ್ಸನ್ ಗೆ ಈಗ ನಡೆಯಲೂ ಕಷ್ಟ.

ಇತ್ತೀಚೆಗೆ ಅಂತ್ಯಗೊಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್‌ ಶೇನ್‌ ವ್ಯಾಟ್ಸನ್‌ ಲೀಗ್‌ ಹಂತದ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವೇನೂ ನೀಡಲಿಲ್ಲ. ಆದರೆ, ತಂಡಕ್ಕೆ ಅಗತ್ಯವಿದ್ದ ಸಂದರ್ಭದಲ್ಲಿ ಪುಟಿದೆದ್ದ ವ್ಯಾಟೊ, ಮುಂಬಯಿ ಇಂಡಿಯನ್ಸ್‌ ವಿರುದ್ಧ ಫೈನಲ್‌ ಪಂದ್ಯದಲ್ಲಿ 80 ರನ್‌ಗಳನ್ನು ಸಿಡಿಸಿ ತಂಡದ ಗೆಲುವಿಗಾಗಿ ಹೋರಾಟ ನಡೆಸಿದ್ದರು.

 

 

IPL ಫೈನಲ್‌ ಪಂದ್ಯದಲ್ಲಿ ಬ್ಯಾಟಿಂಗ್‌ ವೇಳೆ ಎಡಗಾಲಿನ ಮಂಡಿ ಹರಿದು ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದ ವ್ಯಾಟ್ಸನ್‌, ಈ ವಿಚಾರವನ್ನು ಯಾರಿಗೂ ಹೇಳದೆ ಸಿಎಸ್‌ಕೆ ಗೆಲುವಿಗಾಗಿ ಕೊನೆಯ ಓವರ್‌ ವರೆಗೂ ಹೋರಾಟ ಹಿಡಿದಿಟ್ಟಿದ್ದರು. ದುರದೃಷ್ಟವಶಾತ್‌ ವ್ಯಾಟ್ಸನ್‌ 80 ರನ್‌ಗಳನ್ನು ಚಚ್ಚಿದರೂ ತಂಡ 1 ರನ್‌ಗಳಿಂದ ಫೈನಲ್‌ನಲ್ಲಿ ಸೋಲನುಭವಿಸಿತು.

ತಂಡಕ್ಕಾಗಿ ರಕ್ತವನ್ನೇ ಹರಿಸಿದ್ದ ವ್ಯಾಟ್ಸನ್‌ ಅವರ ಬದ್ಧತೆ ಕಂಡು ಇಡೀ ಕ್ರಿಕೆಟ್‌ ಜಗತ್ತೇ ಶರಣು ಶರಣೆಂದಿತ್ತು.ಆದರೆ ಸದ್ಯ ವ್ಯಾಟ್ಸನ್ ನಡೆಯಲೂ ಕಷ್ಟ ಪಡುತ್ತಿದ್ದಾರೆ. ಪಂದ್ಯದ ವೇಳೆಯಲ್ಲಿ ಗಾಯ ಮಾಡಿಕೊಂಡಿದ್ದ ಶೇನ್ ಕಾಲಿಗೆ ಪಂದ್ಯ ಮುಗಿದ ನಂತರ ಆರು ಹೊಲಿಗೆ ಹಾಕಲಾಗಿತ್ತು. ಈಗ ಶೇನ್ ವ್ಯಾಟ್ಸನ್ ಕುಂಟುತ್ತಾ ನಡೆಯುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕ್ರೀಡಾಭಿಮಾನಿಗಳು ಆಸೀಸ್ ಮೂಲದ ಆಟಗಾರನ ಕಾಲು ನೋವು ಶೀಘ್ರ ಗುಣಮುಖವಾಗಲು ಹಾರೈಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top