fbpx
ಸಮಾಚಾರ

ತಮ್ಮನ್ನು ಟ್ರೊಲ್ ಮಾಡಿದ ಐಸಿಸಿಗೆ ತಕ್ಕ ತಿರುಗೇಟು ನೀಡಿದ ಸಚಿನ್ ತೆಂಡೂಲ್ಕರ್ .

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ನಿಂದ ನಿವೃತ್ತಿಯಾದರೂ ಹೆಚ್ಚಾಗಿ ಮೈದಾನದಲ್ಲೇ ಕಾಣಿಸಿಕೊಳ್ಳುತ್ತಾರೆ. ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿ, ಚಾರಿಟಿ ಕ್ರಿಕೆಟ್ ಪಂದ್ಯ ಸೇರಿದಂತೆ ಕ್ರಿಕೆಟ್ ಜೊತೆ ಸಕ್ರೀಯರಾಗಿದ್ದಾರೆ. ಆದರೆ ಇದೀಗ ತಾವು ಟ್ವಿಟರ್‌ನಲ್ಲಿ ಪ್ರಕಟಿಸಿದ್ದ ವಿಡಿಯೊವನ್ನು ಟ್ರೋಲ್ ಮಾಡಿದ ಐಸಿಸಿಗೆ ಸಚಿನ್ ತೆಂಡೂಲ್ಕರ್ ಹಾಸ್ಯವಾಗಿ ರೀಟ್ವೀಟ್ ಮಾಡಿರುವ ಪ್ರಸಂಗ ನಡೆದಿದೆ.

 

ಸಚಿನ್ ಇತ್ತೀಚೆಗೆ ತಮ್ಮ ಟ್ವಿಟರ್​ನಲ್ಲಿ ಗೆಳೆಯ ವಿನೋದ್ ಕಾಂಬ್ಳೆ ಜೊತೆಗೆ ನೆಟ್ಸ್​​ನಲ್ಲಿ ಕ್ರಿಕೆಟ್ ಆಡುತ್ತಿರುವ ವೀಡೀಯೊವನ್ನ ಪೋಸ್ಟ್​ ಮಾಡಿದ್ರು. ಈ ವೀಡೀಯೊದಲ್ಲಿ ಸಚಿನ್ ಬೌಲ್ ಮಾಡುತ್ತಿರುವುದರ ಸ್ಕ್ರೀನ್​ ಶಾಟ್​​​ ತೆಗೆದಿದ್ದ ಐಸಿಸಿ,ಮಾಜಿ ಅಂಪೈರ್ ಸ್ಟೀವ್​ ಬಕ್ನರ್ ನೋ ಬಾಲ್​ ನೀಡುತ್ತಿರುವ ಪೋಟೊದ ಜೊತೆಗೆ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿತ್ತು. ಸಚಿನ್​ ನಿಮ್ಮ ಫ್ರಂಟ್​ ಫೂಟ್​ ನೋಡಿಕೊಳ್ಳಿ ಎಂದು ಟ್ವೀಟ್​ ಮಾಡಿತ್ತು.

 

 

ಆ ವಿಡಿಯೊದಲ್ಲಿ ಸಚಿನ್ ಗೆರೆ ದಾಟಿ ಬೌಲಿಂಗ್ ಮಾಡಿದ ದೃಶ್ಯವಿದೆ. ಅದರ ಮೇಲೆ ಮಾಜಿ ಅಂಪೈರ್ ಸ್ಟೀವ್ ಬಕ್ನರ್ ನೋ ಬಾಲ್ ಸಂಜ್ಞೆ ಮಾಡುವ ಚಿತ್ರವನ್ನು ಅಂಟಿಸಿ ಟ್ರೋಲ್ ಮಾಡಿತ್ತು ಐಸಿಸಿ. ಅದಕ್ಕೆ ಟ್ವೀಟ್‌ನಲ್ಲೇ ಪ್ರತಿಕ್ರಿಯಿಸಿದ್ದ ಸಚಿನ್, ‘‘ಅಬ್ಬಾ ಈ ಬಾರಿ ನಾನು ಬ್ಯಾಟಿಂಗ್ ಬದಲಿಗೆ ಬೌಲಿಂಗ್ ಮಾಡುತ್ತಿದ್ದೇನೆ. ಏನಾದರೂ ಇರಲಿ, ಅಂಪೈರ್ ತೀರ್ಮಾನವೇ ಅಂತಿಮ,’’ ಎಂದು ಬರೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top