fbpx
ಸಮಾಚಾರ

“ಪ್ರತಿಯೊಂದು ಧರ್ಮವೂ ತನ್ನದೇ ಆದ ಭಯೋತ್ಪಾದಕರನ್ನು ಹೊಂದಿದೆ” ವರಸೆ ಬದಲಿಸಿದ ಕಮಲ್ ಹಾಸನ್.

ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದು, ಆತನ ಹೆಸರು ನಾಥೂರಾಮ್ ಗೋಡ್ಸೆ’ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ನಟ, ರಾಜಕಾರಣಿ ಕಮಲ್ ಹಾಸನ್ ಇದೀಗ ಎಂದಿನಂತೆ ತಮ್ಮ ವರಸೆ ಬದಲಿಸಿದ್ದಾರೆ. ಇದೀಗ “ಎಲ್ಲಾ ಧರ್ಮದಲ್ಲೂ ಉಗ್ರರಿದ್ದಾರೆ. ಯಾವ ಧರ್ಮದವರೂ ತಾವು ಸಂಭಾವಿತರು ಎಂದುಕೊಳ್ಳುವುದು ಬೇಡ. ಎಲ್ಲಾ ಮತಗಳಲ್ಲೂ ಉಗ್ರವಾದಿಗಳಿದ್ದರು ಎಂಬುದನ್ನು ಇತಿಹಾಸವೇ ಹೇಳುತ್ತದೆ” ಎಂದು ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸ್ಥಾಪಕ ಕಮಲ್ ಹಾಸನ್ ಹೇಳಿದ್ದಾರೆ.

ನಾಥೂರಾಮ್ ಗೋಡ್ಸೆ ಅವರ ಕುರಿತು ಅವರಾಡಿದ ಮಾತಿಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, “ನನ್ನನ್ನು ಬಂಧಿಸುತ್ತಾರೆ ಎಂಬ ಭಯ ನನಗಿಲ್ಲ. ಅವರು ನನ್ನನ್ನು ಬಂಧಿಸುವುದಾದರೆ ಬಂಧಿಸಲಿ. ಹಾಗೊಮ್ಮೆ ಅವರು ಮಾಡಿದ್ದೇ ಆದರೆ ಅವರೇ ಸಂಕಷ್ಟ ಎದುರಿಸಬೇಕಾಗುತ್ತದೆ. ಇದು ಎಚ್ಚರಿಕೆಯಲ್ಲ, ಕೇವಲ ಸಲಹೆ” ಎಂದು ಕಮಲ್ ಹಾಸನ್ ಹೇಳಿದರು.

ಪ್ರತಿಯೊಂದು ಧರ್ಮವೂ ತನ್ನದೇ ಆದ ಭಯೋತ್ಪಾದಕರನ್ನು ಹೊಂದಿದೆ. ಇದೇ ಹಿನ್ನಲೆಯಲ್ಲಿ ನಾನು ಹೇಳಿಕೆ ನೀಡಿದ್ದೆ. ನಾವು ಯಾರೂ ನಾವು ಪವಿತ್ರರು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಪ್ರತೀಯೊಂದು ಧರ್ಮದಲ್ಲೂ ಆತಂಕವಾದಿಗಳು ಇದ್ದಾರೆ ಎಂಬುದನ್ನು ಇತಿಹಾಸವೇ ತಿಳಿಸಿದೆ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top