fbpx
ಸಮಾಚಾರ

ಸಾಹಸಸಿಂಹನ ಮೊದಲ ಕಾರಿನ ಬಗ್ಗೆ ಈ ಇಂಟರೆಸ್ಟಿಂಗ್ ವಿಷ್ಯ ಏನು ಗೊತ್ತಾ? ಅದು ಈಗ ಇರೋದು ಎಲ್ಲಿ ಗೊತ್ತಾ?

ಡಾ.ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ.ವಿಷ್ಣುವರ್ಧನ್ ಇದುವರೆಗೆ ಒಟ್ಟು ಸುಮಾರು 200 ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವಾರು ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನೆಮಾಗಳಲ್ಲೂ ಅಭಿನಯ ಮಾಡಿದ್ದಾರೆ. ವಿಷ್ಣುವರ್ಧನ್ ಅವರು ನಮ್ಮಿಂದ ದೂರವಾಗಿದ್ದರೂ ಕೂಡ ಎಂದೆಂದಿಗೂ ಅವರ ನೆನೆಪುಗಳು ನಮ್ಮ ಜೊತೆಯಲ್ಲೇ ಇರುತ್ತವೆ. ಅವರ ಬಳಸಿದ ಮೊದಲ ಕಾರ್ ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿದ್ದೆ.

 

 

ವಿಷ್ಣುವರ್ಧನ್ ಅವರು ಬಳಸಿದ ಮೊದಲ ಕಾರನ್ನು ಇಂದಿಗೂ ನಾವು ‘ಧರ್ಮಸ್ಥಳ ಕಾರ್ ಮ್ಯೂಸಿಯಂ’ ನಲ್ಲಿ ಕಾಣಬಹುದು. 1983ರ ಜಪಾನ್ ನ ಡಾಟ್ಸನ್ ಮಾಡೆಲ್ ಕಾರು ಕನ್ನಡ ಚಿತ್ರರಂಗದ ಮೇರು ನಟ ವಿಷ್ಣುವರ್ಧನ್ ಉಪಯೋಗಿಸುತ್ತಿದ್ದ ಕಾರು. ಈ ಕಾರಿನ ಸಂಖ್ಯೆ ಕೆ ಎ 04 ಎಂ 707 ಆಗಿದೆ. ಈ ಕಾರು ಧರ್ಮಸ್ಥಳ ಮ್ಯೂಸಿಯಂ ನ ಮುಖ್ಯ ಆಕರ್ಷಣೆ ಆಗಿದೆ.

‘ಧರ್ಮಸ್ಥಳ ಕಾರ್ ಮ್ಯೂಸಿಯಂ’ ಪ್ರಾರಂಭವಾದಾಗ ಡಾ.ವೀರೇಂದ್ರ ಹೆಗ್ಗಡೆ ಅವರು ಸಾಹಸ ಸಿಂಹ ವಿಷ್ಣುವರ್ಧನ್ ಭೇಟಿ ಮಾಡಿ ಕಾರ್ ಮ್ಯೂಸಿಯಂ ಬೆಗ್ಗೆ ತಿಳಿಸಿದ್ದರಂತೆ. ಆಗ ಸಾಹಸ ಸಿಂಹ ವಿಷ್ಣುವರ್ಧನ್ ಅವರು ತಾವು ಮೊದಲು ಬಳಸಿದ ಕಾರನ್ನು ‘ಧರ್ಮಸ್ಥಳ ಕಾರ್ ಮ್ಯೂಸಿಯಂ’ ಗೆ ನೀಡಿದ್ದರು ಎಂದು ತಿಳಿದು ಬಂದಿದೆ.

‘ಧರ್ಮಸ್ಥಳ ಕಾರ್ ಮ್ಯೂಸಿಯಂ’ ಇದು ಧರ್ಮಸ್ಥಳ ಮಂಜೂಷಾ ವಸ್ತು ಸಂಗ್ರಹಾಲಯದ ಇನ್ನೊಂದು ಭಾಗ. ಇದು ವಾಹನಗಳಿಗೆ ಸಂಭಂಧ ಪಟ್ಟಿದಾಗಿದ್ದು ಕುದುರೆ ಗಾಡಿ, ಎತ್ತಿನಗಾಡಿ, ದ್ವಿಚಕ್ರ ವಾಹನ ಸೇರಿದಂತೆ ಕಾರುಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಇದು ಮಂಜೂಷಾ ಕಾರ್ ಮ್ಯೂಸಿಯಂ. ಈ ಮ್ಯೂಸಿಯಂನಲ್ಲಿ ಇರುವ ಕಾರುಗಳು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top