fbpx
ಸಮಾಚಾರ

ಮೈ ನೇಮ್ ಈಸ್ ಅಂಜಿ ಶೀರ್ಷಿಕೆ ಬದಲಾವಣೆ- ಶಿವಣ್ಣನ ಚಿತ್ರಕ್ಕೆ ಹೊಸ ಹೆಸರು.

ನಿರ್ದೇಶಕ ಹರ್ಷ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂರನೇ ಸಿನಿಮಾ ಮಾಡುತ್ತಿರುವುದಾಗಿ ಘೋಷಣೆಯಾಗಿತ್ತು. ಈ ಸಿನಿಮಾಗೆ ಈ ಹಿಂದೆ ‘ಮೈ ನೇಮ್ ಇಸ್ ಅಂಜಿ’ ಎಂಬ ಟೈಟಲ್ ನಿಗದಿಯಾಗಿತ್ತು. ಆದರೆ, ಸಿನಿಮಾದ ಹೆಸರು ಇದೀಗ ಬದಲಾಗಿದೆ.

ಶಿವಣ್ಣರ ಭಜರಂಗಿ ಚಿತ್ರ ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಅದೇ ಶೀರ್ಷಿಕೆಯನ್ನು ಮುಂದುವರೆಸಲು ನಿರ್ದೇಶಕ ಹರ್ಷ ತೀರ್ಮಾನಿಸಿದ್ದಾರೆ. ಇದೀಗ ಭಜರಂಗಿ 2 ಆಗಿ ಚಿತ್ರ ಬಿಡುಗಡೆಯಾಗಲಿದೆ. ಹಾಗಂತ ಇದು ಇದು ಭಜರಂಗಿ ಚಿತ್ರದ ಸೀಕ್ವೆಲ್ ಅಲ್ಲ. ಬದಲಿಗೆ ಶೀರ್ಷಿಕೆಯನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ.. ಜೂನ್ 20ಕ್ಕೆ ಭಜರಂಗಿ 2 ಚಿತ್ರದ ಮುಹೂರ್ತ ನಿಗದಿಯಾಗಿದೆ. ಶಿವಣ್ಣರಿಗೆ ನಟಿ ಭಾವನ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

 

 

‘ಭಜರಂಗಿ 2’ ಟೈಟಲ್ ನಲ್ಲಿಯೇ ಹೇಳುವ ಹಾಗೆ ಆಂಜನೇಯನ ಬಗ್ಗೆಯ ಕಥೆ ಹೊಂದಿರುತ್ತದೆ. ಶಿವಣ್ಣನಿಗಾಗಿ ನಿರ್ದೇಶಕ ಹರ್ಷ ಇದಾಗಲೇ ಚಿತ್ರಕಥೆಯನ್ನು ತಯಾರಿಸಿಟ್ಟಿದ್ದಾರೆ. ಈ ಚಿತ್ರವನ್ನು ಖ್ಯಾತ ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ ಅವರು ತಮ್ಮ ಜಯಣ್ಣ ಕಂಬೈನ್ಸ್ ಬ್ಯಾನರಿನ ಅಡಿಯಲ್ಲಿ ನಿರ್ಮಾಣ ಮಾಡಲಿದ್ದಾರಂತೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top