fbpx
ಸಮಾಚಾರ

36 ವರ್ಷದ ಹಿಂದಿನ ಕಪಿಲ್ ದೇವ್ ದಾಖಲೆಯನ್ನು ಅಳಿಸಿಹಾಕಿದ ಪಾಕ್ ಯುವ ಕ್ರಿಕೆಟಿಗ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಮಾಡಿದ್ದ 36 ವರ್ಷದ ಹಳೆಯ ದಾಖಲೆಯನ್ನು ಪಾಕಿಸ್ತಾನದ ಯುವ ಆಟಗಾರ ಇಮಾಮ್-ಉಲ್-ಹಕ್ ಮುರಿದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಬ್ರಿಸ್ಟಾಲ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಪಾಕ್ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್ ಕೇವಲ 131 ಎಸೆತಗಳಲ್ಲೇ ಶತಕೋತ್ತರ ಶತಕಾರ್ಧವನ್ನು ಬಾರಿಸಿದ್ದರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 150 ಅಥವಾ ಅದಕ್ಕಿಂತಲೂ ಹೆಚ್ಚು ರನ್ ಗಳಿಸಿದ ಅತಿ ಕಿರಿಯ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ.

1983ರ ವಿಶ್ವಕಪ್​ ವೇಳೆ ಜಿಂಬಾಬ್ವೆ ವಿರುದ್ದ 175 ರನ್​ ಸಿಡಿಸಿದ್ದ ಕಪಿಲ್ ದೇವ್ 150ರನ್ ಗಳಿಸಿದ ವಿಶ್ವದ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದರು. ತಮ್ಮ 24ನೇ ವರ್ಷದಲ್ಲೇ ದಾಖಲೆ ಬರೆದು ಕಪಿಲ್ ಎಲ್ಲರನ್ನು ನಿಬ್ಬೆರಗಾಗಿಸಿದ್ದರು. ಆದರೀಗ 23ರ ಯುವ ಆಟಗಾರ ಇಮಾಮ್​ ಉಲ್ ಭಾರತದ ಕ್ರಿಕೆಟ್​ ದಂತಕಥೆ ಬರೆದ ದಾಖಲೆಯನ್ನು 36 ವರ್ಷಗಳ ಬಳಿಕ ಮುರಿದಿದ್ದಾರೆ. ಅಲ್ಲದೆ 150 ರನ್​ ಬಾರಿಸಿದ ವಿಶ್ವದ ಕಿರಿಯ ಆಟಗಾರನೆಂಬ ಸಾಧನೆಯ ಹಣೆಪಟ್ಟಿ ತಮ್ಮದಾಗಿಸಿಕೊಂಡಿದ್ದಾರೆ.

ಇದು ಏಕದಿನದಲ್ಲಿ ಇಮಾಮ್ ಬ್ಯಾಟ್‌ನಿಂದ ದಾಖಲಾದ ಜೀವನಶ್ರೇಷ್ಠ ಮೊತ್ತವೂ ಹೌದು. ಹಾಗೆಯೇ ಇಂಗ್ಲೆಂಡ್‌ ವಿರುದ್ಧ ಏಕದಿನದಲ್ಲಿ ಪಾಕ್ ಬ್ಯಾಟ್ಸ್‌ಮನ್‌ನಿಂದ ದಾಖಲಾದ ಗರಿಷ್ಠ ಮೊತ್ತ ಕೂಡಾ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top