fbpx
ಸಮಾಚಾರ

ಕ್ರಿಕೆಟ್ ಇತಿಹಾಸದಲ್ಲೇ ಮೊದಲು- 10 ಮಂದಿ ಡಕೌಟ್, 4 ರನ್ನಿಗೆ ಇಡೀ ತಂಡ ಆಲೌಟ್.

ಕೇರಳದಲ್ಲಿ ನಡೆದ 19ರ ವಯೋಮಾನದ ಜಿಲ್ಲಾ ಮಟ್ಟದ ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಾಸರಗೋಡು ಅಂಡರ್ 19 ಮಹಿಳಾ ಕ್ರಿಕೆಟ್ ತಂಡವು ಕೇವಲ ನಾಲ್ಕು ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರಿ ಮುಖಭಂಗಕ್ಕೊಳಗಾಗಿದೆ. ಇನ್ನು ಆಸಕ್ತಿದಾಯಕ ಸಂಗತಿಯೆಂದರೆ ಕಾಸರಗೋಡು ತಂಡದ ಯಾವ ಆಟಗಾರ್ತಿಯು ಒಂದಂಕಿಯನ್ನು ತಲುಪಲಿಲ್ಲ. ಆದರೂ ತಂಡವು ಇತರೆ ರನ್‌ಗಳ ಮೂಲಕ ನಾಲ್ಕು ರನ್ ಗಳಿಸುವಲ್ಲಿ ಯಶಸ್ವಿಯಾಗಿತ್ತು.

ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂದಲ್‍ಮಣ್ಣ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಯನಾಡು ಹಾಗೂ ಕಾಸರಗೋಡು ಅಂಡರ್ ತಂಡಗಳು ಮುಖಾಮುಖಿ ಆಗಿದ್ದವು. ಆದರೆ ಪಂದ್ಯದಲ್ಲಿ ಕಾಸರಗೋಡು ತಂಡ ಕೆಟ್ಟ ಪ್ರದರ್ಶನವನ್ನು ತೋರಿದ್ದು ಕುಖ್ಯಾತಿಗೊಳಗಾಗಿದೆ.

ಇನ್ನಿಂಗ್ಸ್ ಅಂತ್ಯದ ವೇಳೆಗೆ ಕಾಸರಗೋಡು ತಂಡದ ಆಟಗಾರ್ತಿಯರ ಸ್ಕೋರ್ ಕಾರ್ಡ್ 0,0,0,0,0,0,0,0,0,0,0 ರೀತಿ ಇತ್ತು. ಕಾಸರಗೋಡು ತಂಡದ ಪರ ಅಂತಿಮ ಆಟಗಾರ್ತಿ ಯಾವುದೇ ರನ್ ಗಳಿಸದೆ ಅಜೇಯರಾಗಿ ಉಳಿದಿದ್ದರು. ವಿಶೇಷವೆಂದರೆ ತಂಡದ ಎಲ್ಲಾ ಆಟಗಾರ್ತಿಯರು ಕೂಡ ಬೌಲ್ಡ್ ಆಗುವ ಮೂಲಕ ಔಟಾಗಿದ್ದರು. ವೈಡ್ ರೂಪದಲ್ಲಿ 4 ರನ್ ಬಂದಿದ್ದ ಕಾರಣ ಗೆಲ್ಲಲು 5 ರನ್ ಗುರಿ ಪಡೆದ ವಯನಾಡು ತಂಡ ಒಂದು ಓವರಿನಲ್ಲಿ ಗುರಿ ತಲುಪಿ 10 ವಿಕೆಟ್ ಗಳ ಜಯ ಪಡೆಯಿತು. ಆದರೆ ಕಾಸರಗೋಡು ತಂಡ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಜಿಲ್ಲಾ ಮಟ್ಟದ ಕ್ರಿಕೆಟ್ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top