fbpx
ಸಮಾಚಾರ

‘ನಿಖಿಲ್ ಎಲ್ಲಿದ್ದಿಯಪ್ಪಾ’ ಸಿನಿಮಾ ಬಗ್ಗೆ ಯಶ್ ಹೇಳಿದ್ದೇನು? ನೀವೇ ಕೇಳಿ

ಲೋಕಸಭಾ ಚುನಾವಣೆ ಬಳಿಕ ಪ್ರಥಮ ಬಾರಿಗೆ ಮಂಡ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಭೇಟಿ ಕೊಟ್ಟಿದ್ದಾರೆ. ಮಂಡ್ಯದ ಅಭಿಮಾನಿಯೊಬ್ಬರ ಗೃಹಪ್ರವೇಶದಲ್ಲಿ ಭಾಗಿಯಾಗಲು ಆಗಮಿಸಿದ್ದರು. ಈ ವೇಳೆ ಚುನಾವಣೆ ಬಗ್ಗೆ ಮಾತನಾಡುತ್ತಾ, ಸುಮಲತಾ ಚುನಾವಣೆಯಲ್ಲಿ ಗೆಲ್ತಾರೆ. ಒಳ್ಳೆಯ ವಾತಾವರಣ ಇದೆ. ಈಗಲೇ ಗೆಲುವಿನ ಅಂತರ ಹೇಳಿದ್ರೆ ಕೊಚ್ಚಿಕೊಂಡಂತಾಗುತ್ತೆ. ಮಂಡ್ಯ ಫಲಿತಾಂಶವನ್ನ ನಿರ್ದಿಷ್ಟವಾಗಿ ಹೇಳೋಕಾಗ್ತಿಲ್ಲ ಎಂದಿದ್ದಾರೆ.

ನಿಖಿಲ್ ಎಲ್ಲಿದ್ದಿಯಪ್ಪಾ? ವಿಚಾರವಾಗಿ ಪ್ರಶ್ನಿಸಿದಾಗ “ನಿಖಿಲ್ ಎಲ್ಲಿದಿಯಪ್ಪಾ… ಸಿನಿಮಾಗೆ ಒಳ್ಳೆಯದಾಗಲಿ.” ಎಂದು ಹೇಳಿ ಶುಭಹಾರೈಸಿದರು.

ಇನ್ನು ಜೋಡೆತ್ತು ಸಿನೆಮಾ ಸೆಟ್ಟೇರುವ ವಿಚಾರವಾಗಿ ಮಾತನಾಡಿದ ಯಶ್ “ಜೋಡೆತ್ತು ಎಂದು ದರ್ಶನ್ ಹೇಳಿದರು ಅನಂತರ ತುಂಬಾ ಫೇಮಸ್ ಆಯ್ತು. ಜೋಡೆತ್ತು ಟೈಟಲ್ ರಿಜಿಸ್ಟರ್‌ ಕೂಡ ಆಗಿದೆ. ನಾನೇನು ಆ ಸಿನಿಮಾದಲ್ಲಿ ನಟಿಸುವುದಿಲ್ಲ. ದರ್ಶನ್ ಜತೆ ಸಿನಿಮಾ ಮಾಡಬೇಕಂದ್ರೆ ಅವ್ರೊಬ್ಬ ದೊಡ್ಡ ಸ್ಟಾರ್. ಒಳ್ಳೆಯ ಕಥೆ ಸಿಗಬೇಕು. ಕಥೆ ಬಂದ್ರೆ ದರ್ಶನ್ ಜತೆ ಸಿನಿಮಾ ಮಾಡುತ್ತೇನೆ ಎಂದರು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top