ಸಮಾಚಾರ

ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಕೆಜಿಎಫ್ ವಿಲನ್.

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಸಂಚಲನ ಸೃಷ್ಟಿಸಿದ್ದ “ಕೆಜಿಎಫ್” ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದ ಜಾನ್ ಕೊಕ್ಕೇನ್ ಕೇರಳ ಯುವತಿಯನ್ನು ವರಿಸುವ ಮೂಲಕ ಸಾಂಸಾರಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಕೇರಳ ಮೂಲದ ಪ್ರಿಯಾ ರಾಮಚಂದ್ರನ್ ಅವರೊಡನೆ ಜಾನ್ ಹಸೆಮಣೆ ಏರಿದ್ದು ನಟ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಾಕುವ ಮೂಲಕ ಮದುವೆ ವಿಚಾರವನ್ನು ಸಂಭ್ರಮದಿಂದ ಹಂಚಿಕೊಂಡಿದ್ದಾರೆ. ಕೇರಳದಲ್ಲಿ ಸೌರಮಾನ ಯುಗಾದಿ (ವಿಷು ಹಬ್ಬ)ಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಸೋಮವಾರ ವಿಷು ಹಬ್ಬವಿದ್ದು ಜಾನ್ ತನ್ನ ಗೆಳತಿಯೊಂದಿಗೆ ಅದೇ ದಿನ ವಿವಾಹ ಬಂಧನಕ್ಕೆ ಒಳಗಾದರು.

 

 

ಮೂಲತಃ ಮಲಯಾಳಿಯಾಗಿರೋ ಜಾನ್, ಪುನೀತ್ ರಾಜ್‌ಕುಮಾರ್ ನಟನೆಯ ಪೃಥ್ವಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಎಲ್ಲರ ಗಮನ ಸೆಳೆದಿದ್ದರು. ನಂತರ ದರ್ಶನ್ ಅಭಿನಯದ ಶೌರ್ಯ, ಶಿವಣ್ಣ ಜೊತೆಗೆ ಮೈಲಾರಿ, ಸೂರಿ ನಿರ್ದೇಶನದ ಅಣ್ಣಾಬಾಂಡ್ ಹೀಗೆ ಹಲವು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top