ಸಮಾಚಾರ

ವಿಂಗ್ ಕಮಾಂಡರ್ ಅಭಿನಂದನ್ ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಸುದ್ದಿ ಸತ್ಯವೇ?

ದೇಶದಲ್ಲಿ ಎರಡನೇ ಹಂತದ ಚುನಾವಣೆಗೆ ಒಂದು ದಿನ ಮಾತ್ರ ಬಾಕಿ ಇರುವಂತೆ ರಾಜಕೀಯ ಪಕ್ಷಗಳು ಮತದಾರರನ್ನು ಒಲಿಸಲು ಕಸರತ್ತು ಮಾಡುತ್ತಿವೆ. ಇದೀಗ ಲೋಕಸಭಾ ಚುನಾವಣೆಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಅವರು ಬಿಜೆಪಿಗೆ ಮತ ಹಾಕಿದ್ದಾರೆ ಎನ್ನುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕೇಸರಿ ಬಣ್ಣದ ಬಿಜೆಪಿ ಶಾಲು ಹಾಕಿರುವ ವ್ಯಕ್ತಿಯೊಬ್ಬರ ಫೋಟೊ ಇದಾಗಿದ್ದು ಈ ವ್ಯಕ್ತಿ ವಿಂಗ್ ಕಮಾಂಡರ್ ಅಭಿನಂದನ್ ರನ್ನು ಹೋಲುತ್ತಿದ್ದಾರೆ. ಕೆಲ ಕಿಡಿಗೇಡಿಗಳು ಯೋಧನ ಹೆಸರನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಂಡಿದ್ದಾರೆ. ಬಿಜೆಪಿ ಬೆಂಬಲಿತ ಹಲವು ಪೇಜ್ ಗಳು ಮತ್ತು ಫೇಸ್ ಬುಕ್ ಗ್ರೂಪ್ ಗಳಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದೆ. ಆದರೆ ಇದು ಅಭಿನಂದನ್ ರನ್ನು ಹೋಲುವ ವ್ಯಕ್ತಿಯ ಫೋಟೊ ಹೊರತು ಅಭಿನಂದನ್ ರದ್ದಲ್ಲ ಎಂದು ತಿಳಿಯದೆ ಸಾವಿರಾರು ಮಂದಿ ಇಂತಹ ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದಾರೆ.,

 

 

ಪೋಸ್ಟ್ ನಲ್ಲಿ ಏನಿದೆ”
ವಿಂಗ್ ಕಮಾಂಡರ್ ಅಭಿನಂದನ್‌ ಅವರು ಬಹಿರಂಗವಾಗಿ ಬಿಜೆಪಿಯನ್ನು ಬೆಂಬಲಿಸಿದ್ದು ಮೋದಿಜಿಯನ್ನು ಪ್ರಧಾನಿ ಮಾಡಲು ಮತ ಚಲಾಯಿಸಿದ್ದಾರೆ. ಮೋದಿ ಅವರಿಗಿಂತ ಉತ್ತಮ ಪ್ರಧಾನಿ ಬೇರೊಬ್ಬರಿಲ್ಲ ಎಂದೂ ಹೇಳಿದ್ದಾರೆ. ಇದು ಕಾಂಗ್ರೆಸ್‌ನವರಿಗೆ ಮತ್ತು ಜಿಹಾದಿಗಳಿಗೆ ತಲುಪುವಂತೆ ನೋಡಿಕೊಳ್ಳಿ ಸ್ನೇಹಿತರೇ,. ನೀವು (ಕಾಂಗ್ರೆಸ್‌) ಯೋಧನನ್ನು ಜೀವಂತ ವಾಪಸ್ ಕರೆಸಿಕೊಳ್ಳಲಿಲ್ಲ ಆದರೆ ಇಂದು ಅಭಿನಂದನ್ ವಾಪಸಾಗಿದ್ದು ಬಿಜೆಪಿಗೆ ಮತವನ್ನೂ ಹಾಕಿದ್ದಾರೆ’ ಎಂದು ‘ನಮೋ ಬೆಸ್ಟ್‌ ಪಿಎಂ ಆಫ್ ಇಂಡಿಯಾ’ ಎಂಬ ಫೇಸ್‌ಬುಕ್‌ ಪೇಜ್ ನಲ್ಲಿ ಪೋಸ್ಟ್ ಹಾಕಲಾಗಿದೆ.

ವಿಂಗ್ ಕಮಾಂಡರ್ ಅಭಿನಂದನ್ ಅವರನ್ನೇ ಹೋಲುವ ವ್ಯಕ್ತಿಯೊಬ್ಬನಿಗೆ, ಅದೇ ರೀತಿಯಲ್ಲಿ ಮೀಸೆ ಕತ್ತರಿಸಿ, ಕನ್ನಡಕ ಹಾಕಿ, ಕೊರಳಿಗೆ ಬಿಜೆಪಿ ಪಕ್ಷದ ಶಾಲು ಹಾಕಿಸಿಕೊಂಡು, ಈ ನಕಲಿ ವ್ಯಕ್ತಿಯ ಫೋಟೋ ತೆಗೆಸಿ ಪೋಸ್ಟ್ ಮಾಡಲಾಗಿದೆ.ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೂ ಮತ್ತು ನಕಲಿ ವ್ಯಕ್ತಿಗೂ ವ್ಯತ್ಯಾಸ ತಿಳಿಯುತ್ತದೆ.

 

 

ಅಂದಹಾಗೆ ಅಭಿನಂದನ್ ಅವರು ಮೂಲ ತಮಿಳುನಾಡಿನವರು. ಅವರಿಗೆ ತಮಿಳುನಾಡಿನಲ್ಲಿ ಮತದಾನದ ಹಕ್ಕಿರುವ ಸಾಧ್ಯತೆಯೇ ಹೆಚ್ಚು. ಆದರೆ, ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ತಮಿಳುನಾಡಿನಲ್ಲಿ ಇರಲಿಲ್ಲ. ಇನ್ನು ನಿಯಮಗಳ ಪ್ರಕಾರ, ಭಾರತೀಯ ವಾಯುಪಡೆಯ ಅಧಿಕಾರಿಗಳು ರಾಜಕೀಯ ಪಕ್ಷವೊಂದರ ಪರ ಪ್ರಚಾರ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ಅಭಿನಂದನ್ ಅವರು ಬಿಜೆಪಿ ಪರ ಪ್ರಚಾರ ಮಾಡುವಂತೆಯೂ ಇಲ್ಲ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top