fbpx
ಸಮಾಚಾರ

ಮೋದಿ ಸಮಾವೇಶದಲ್ಲಿ ಎಡವಟ್ಟು- ತೇಜಸ್ವಿ ಸೂರ್ಯ ವಿರುದ್ಧ ಬಿಜೆಪಿ ಹೈಕಮಾಂಡ್ ಗೆ ಕಂಪ್ಲೇಂಟ್.

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ತಮ್ಮ ಪಕ್ಷದ ನಾಯಕರು ಮತ್ತು ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪದ ನಡುವೆ ಮತ್ತೊಂದು ಯಡವಟ್ಟು ಮಾಡ್ಕೊಂಡಿದ್ದಾರೆ. ಅದೂ ಕೂಡ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ.

ಏಪ್ರಿಲ್ 13 ರಂದು ನಡೆದ ‘ವಿಜಯ ಸಂಕಲ್ಪ’ ಯಾತ್ರೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು. ಸಮಾವೇಶಕ್ಕೆ ಬರುವಂತೆ ಬಸವನಗುಡಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಸುಮಾರು 1000 ವಿಐಪಿ ಪಾಸ್‌ಗಳನ್ನು ತೇಜಸ್ವಿ ಸೂರ್ಯ ನೀಡಿದ್ದರು. ಒಂದು ಪಾಸ್‌ನಲ್ಲಿ ಇಬ್ಬರು ಕಾರ್ಯಕರ್ತರು ಸಮಾವೇಶದ ವೇದಿಕೆಗೆ ಪ್ರವೇಶಿಸಲು ಅನುಮತಿ ನೀಡಲಾಗಿತ್ತು.

ಪಾಸ್​ ನೀಡಿ ಸಮಾವೇಶಕ್ಕೆ ಬರುವಂತೆ ಆಹ್ವಾನಿಸುವುದರ ಜೊತೆಗೆ ತನ್ನ ಕಾರ್ಯಕರ್ತರಿಗೆ “ನಾನು ವೇದಿಕೆಯಲ್ಲಿ ಭಾಷಣ ಮಾಡುವಾಗ ನನ್ನ ಹೆಸರನ್ನ ಜೋರಾಗಿ ಕೂಗಬೇಕು. ನನಗೆ ಮತದಾರರ ಸಂಪೂರ್ಣ ಬೆಂಬಲವಿದೆ ಎಂಬ ಸಂದೇಶ ರವಾನೆ ಆಗಬೇಕು. ನೀವು ವೇದಿಕೆಯ ಹತ್ತಿರವೇ ಕುಳಿತು ನನ್ನ ಹೆಸರನ್ನು ಕೂಗಬೇಕು” ಎಂದು ಸೂಚಿಸಿದ್ದರು ಎನ್ನಲಾಗಿದೆ.

ತೇಜಸ್ವಿ ಸೂರ್ಯ ಹೇಳಿದಂತೆಯೇ ಘೋಷಣೆ ಕೂಗಿದ್ದಾರೆ. ಈ ಘೋಷಣೆ, ರಾಜ್ಯ ಬಿಜೆಪಿ ಮುಖಂಡರು ಮತ್ತು ಸ್ಥಳೀಯ ಶಾಸಕರನ್ನು ಕೆರಳಿಸಿದ್ದು ಬಸವನಗುಡಿ ಕಾರ್ಯಕರ್ತರ ಈ ನಡವಳಿಕೆಯಿಂದ ಬಿಜೆಪಿ ಮುಖಂಡರು ಅಸಮಾಧಾನಗೊಂಡಿದ್ದಾರೆ. ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್, ಡಿ.ವಿ. ಸದಾನಂದಗೌಡ, ಪಿ.ಸಿ.ಮೋಹನ್, ‌ವಿ.ಸೋಮಣ್ಣ, ಡಾ. ತೇಜಸ್ವಿನಿ ಅನಂತಕುಮಾರ್ ಕೂಡ ಇದ್ದರು. ವೇದಿಕೆ ಮೇಲಿದ್ದ ನಾಯಕರಿಗೆ ಇರಿಸುಮುರಿಸು ಕೂಡ ಉಂಟಾಗಿದೆ ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ಪ್ರಧಾನಿ ಮೋದಿಯ ಸಮಾವೇಶಗಳಲ್ಲಿ ‘ಮೋದಿ ಮೋದಿ ಎಂಬ ಉದ್ಘೋಷಗಳು ಕೇಳಿಸುತ್ತವೆ. ಆದರೆ ಮೊನ್ನೆಯ ಸಮಾವೇಶದಲ್ಲಿ ಮೋದಿ ಮೋದಿ ಎಂಬ ಘೋಷಣೆ ಕೇಳಿಸುವ ಬದಲು ಸೂರ್ಯ ಸೂರ್ಯ ಎಂಬ ಘೋಷಣೆಯೇ ಜೋರಾಗಿ ಕೇಳಿಸಿದೆ . ಇದರಿಂದ ಕೋಪಗೊಂಡಿರುವ ಬಿಜೆಪಿ ನಾಯಕರು ಈ ವಿಚಾರವನ್ನ ಹೈಕಮಾಂಡ್​​ಗೂ ಮುಟ್ಟಿಸಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top