fbpx
ಸಮಾಚಾರ

ಸುಳ್ಳು ಹೇಳಿ ಸಿಕ್ಕಿ ಬಿದ್ದ ಸಿಎಂ HDK- ತಂದೆ ಅಂಬರೀಷ್ ಮೇಲೆ ಆಣೆ ಮಾಡಿ ಅಭಿಷೇಕ್ ಹೇಳಿದ್ದೇನು?

ಅಂಬರೀಶ್‌ ಅವರ ಪಾರ್ಥಿವ ಶರೀರವನ್ನು ಅವರ ಕುಟುಂಬ ಸದಸ್ಯರ ವಿರೋಧದ ಮಧ್ಯೆಯೂ ತಾವು ಮಂಡ್ಯಕ್ಕೆ ತರಲು ವ್ಯವಸ್ಥೆ ಮಾಡಿದ್ದಾಗಿ ಹೇಳಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ವೇದಿಕೆಯಿಂದಲೇ ಅಂಬಿ ಪುತ್ರ ಅಭಿಷೇಕ್ ಪ್ರತ್ಯುತ್ತರಿಸಿದ್ದಾರೆ.

“ಅಂದು ರಾತ್ರಿ ವಿಕ್ರಂ ಆಸ್ಪತ್ರೆಯಲ್ಲಿ ಮಂಡ್ಯಕ್ಕೆ ತಂದೆಯವರನ್ನು ಕರೆದುಕೊಂಡು ಹೋಗೋಣಾ ಎಂದು ಹೇಳಿದ್ದೇ ನಾನು. ಇದು ನಮ್ಮಪ್ಪಾನಾಣೆಗೂ ಸತ್ಯ ನಾನು ಇದನ್ನು ಹೇಳಿದ ವೇಳೆ ಕುಮಾರಸ್ವಾಮಿಯವರು, ಇದು ಸಾಧ್ಯವಾಗದ ಕೆಲಸ. ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಹೇಳಿದ್ದರು.” ಎಂದು ಅಭಿಷೇಕ್ಅಂಬರೀಷ್ ಹೇಳಿದ್ದಾರೆ.

“ಬೆಂಗಳೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಅಂಬರೀಶ್‌ ಅವರ ಪಾರ್ಥಿವ ಶರೀರವನ್ನು ಇರಿಸಿದ್ದ ಸಂದರ್ಭದಲ್ಲೂ ನನ್ನ ಬಳಿ ಬಂದ ಕುಮಾರಸ್ವಾಮಿಯವರು, ಮಂಡ್ಯಕ್ಕೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗುವುದು ಸಾಧ್ಯವಿಲ್ಲ ಎಂದಿದ್ದರು. ಆದರೆ ಈ ಮಾತನ್ನು ಕೇಳಿಸಿಕೊಂಡ ಮಂಡ್ಯದ ಗಣ್ಯರೊಬ್ಬರು ಅಂಬರೀಶ್‌ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಲೇಬೇಕು ಎಂದು ಪಟ್ಟು ಹಿಡಿದಿದ್ದರು. ಜನರ ಒತ್ತಾಯದ ಮೇರೆಗೆ ದೇಹ ತರಲಾಯಿತು. ನನ್ನ ತಂದೆ ಮೇಲಾಣೆ, ಇದು ಸತ್ಯ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top