ಸಮಾಚಾರ

ಸುಮಲತಾ ಅಂಬರೀಷ್ ಫೇಸ್‌ಬುಕ್ ಪೇಜ್ ಬ್ಲಾಕ್- ಕುತಂತ್ರ ಹಿಂದೆ ಇರೋದು ಇವರ ಕೈವಾಡವೇ?

ಮಂಡ್ಯ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಷ್ ಅವರಿಗೆ ಮತ್ತೊಂದು ಸವಾಲು ಎದುರಾಗಿದ್ದು ‘ಸುಮಲತಾ ಅಮರನಾಥ್’ ಹೆಸರಿನಲ್ಲಿದ್ದ ಅವರ ಫೇಸ್‍ಬುಕ್ ಪೇಜ್ ಬ್ಲಾಕ್ ಆಗಿದೆ.

ಕುತಂತ್ರದ ಭಾಗವಾಗಿ ನನ್ನ ಅಧಿಕೃತ ಖಾತೆಯನ್ನು ಕೆಲವರು ಬ್ಲಾಕ್​ ಮಾಡಿದ್ದಾರೆ. ಹಾಗಾಗಿ ಹೊಸ ಖಾತೆ ತೆರೆದು ಪ್ರಚಾರ ಆರಂಭಿಸಿದ್ದೇನೆ. ಹೊಸ ಖಾತೆಗೆ ಅಭಿಮಾನಿಗಳು ಸೇರ್ಪಡೆಯಾಗುವಂತೆ ಮತ್ತು ಹೊಸ ಅಕೌಂಟ್​ ಅನ್ನು ಪ್ರಮೋಷನ್​ ಮಾಡುವಂತೆ ಸುಮಲತಾ ಅಂಬರೀಷ್​ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಇದು ಜೆಡಿಎಸ್ ಕೈವಾಡವೇ?
ಸುಮಲತಾ ಅವರ ಫೇಸ್ ಬುಕ್ ಖಾತೆಯನ್ನು ಬ್ಲಾಕ್ ಮಾಡಿದ್ದು ಕುತಂತ್ರದ ಭಾಗವಾಗಿ ಎಂದಿರುವ ಅವರು, ಈ ಮೂಲಕ ನಿಮ್ಮ ಪಕ್ಷ ಎಷ್ಟು ಕೆಳಮಟ್ಟಕ್ಕಿಳಿದಿದೆ ಎಂಬುದು ಸಾಬೀತಾಗಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ. ಆ ಮೂಲಕ ಈ ಕೆಲಸ ಮಾಡಿದ್ದು, ಜೆಡಿಎಸ್ ನವರು ಎಂಬುದನ್ನು ಪರೋಕ್ಷವಾಗಿ ಅವರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸುಮಲತಾ ಅಂಬರೀಶ್ ಅವರು ಸಿಕ್ಕಾಪಟ್ಟೆ ಕ್ರಿಯಾಶೀಲರಾಗಿದ್ದರು. ಚುನಾವಣೆಗೆ ಸಂಬಂಧಿಸಿದಂತೆ ಸಾಕಷ್ಟು ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದರು. ಈಗ ಅವರ ಎಫ್‌ಬಿ ಪೇಜ್ ಬ್ಲಾಕ್ ಆಗಿದ್ದು, ಹೊಸ ಅಧಿಕೃತ ಪುಟ ತೆರೆದಿದ್ದಾರೆ.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top