ಸಮಾಚಾರ

ಮಗಳ ಮದುವೆಗೆ ಅಪರೂಪದ ಅದ್ಭುತ ಗಿಫ್ಟ್ ಕೊಟ್ಟ ಕ್ರೇಜಿ ಸ್ಟಾರ್ ರವಿಚಂದ್ರನ್.

ರವಿಚಂದ್ರನ್‌ ಪುತ್ರಿ ಗೀತಾಂಜಲಿ ಅವರ ಮದುವೆ ಉದ್ಯಮಿ ಅಜಯ್‌ ಅವರ ಜತೆ ಮೇ 28 ಮತ್ತು 29ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಮುದ್ದಿನ ಮಗಳ ಮದುವೆಗಾಗಿ ರವಿ ಸರ್ ವಿಶೇಷ ಗಿಫ್ಟ್ ಅನ್ನು ರೆಡಿ ಮಾಡಿಕೊಂಡಿದ್ದಾರೆ. ಸ್ವತಃ ತಾವೇ ಭಾವನಾತ್ಮಕ ಸಾಲುಗಳಿಂದ ತುಂಬಿರುವ ಹಾಡೊಂದನ್ನು ಬರೆದಿದ್ದು ಅದನ್ನೇ ಮದುವೆಗೆ ಗಿಫ್ಟ್‌ ಆಗಿ ನೀಡಲಿದ್ದಾರೆ. ರವಿಚಂದ್ರನ್‌ ಸಾಹಿತ್ಯ ಬರೆದಿರುವುದು ಮಾತ್ರವಲ್ಲ, ಸ್ವತಃ ಅವರೇ ಈ ಗೀತೆಗೆ ಸಂಗೀತ ಸಂಯೋಜನೆ ಮಾಡಿದ್ದಾರೆ..

“ಬೆಳೆದ ಮೇಲೆ ನೀನು.. ನಾನು ಮಗುವಾದೆ.. ಯಾಕೋ ಏನೋ ತಿಳಿದೇನೇ ಚಡಪಡಿಸಿದೆ ಮನಸು.. ನೋವು ನಲಿವು ಜೊತೆಗೆ ಸಂಭ್ರಮ ಅಡಗಿದೆ.. ಓಓಓಓ… ನನ್ನಾ ಮಗಳೇ..” ಇದು ರವಿಚಂದ್ರನ್, ತಮ್ಮ ಪ್ರೀತಿಯ ಮಗಳು ಗೀತಾಂಜಲಿ ಮದುವೆಗೆ ಕೊಡುತ್ತಿರುವ ಹಾಡಿನ ಉಡುಗೊರೆ. ಗೌತಮ್ ಶ್ರೀವಾಸ್ತವ್ ಅವರು ಹಾಡಿಗೆ ಗಾಯನ ಮಾಡಿದ್ದಾರೆ.

ಕಳೆದ ತಿಂಗಳಷ್ಟೇ ಗೀತಾಂಜಲಿ ಅವರ ನಿಶ್ಚಿತಾರ್ಥ ನೆರವೇರಿತ್ತು. ನಿಶ್ಚಿತಾರ್ಥಕ್ಕೆ ಕೇವಲ ಕುಟುಂಬಕ್ಕಷ್ಟೇ ಆಹ್ವಾನ ನೀಡಲಾಗಿತ್ತು. ಹಾಗಾಗಿ ಮದುವೆಯನ್ನು ಎರಡು ದಿನಗಳ ಕಾಲ ಅದ್ಧೂರಿಯಾಗಿ ಮಾಡಲು ಎರಡು ಕುಟುಂಬಗಳು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಕ್ಷಿಣ ಭಾರತದ ಬಹುತೇಕ ತಾರೆಯರು ಮತ್ತು ಬಾಲಿವುಡ್‌ನ ನಟ ನಟಿಯರು ಈ ಮದುವೆಗೆ ಬರುವ ಸಾಧ್ಯತೆಯಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top