fbpx
ಸಮಾಚಾರ

ಭಾರತ ದೇಶಕ್ಕೇ ಹೆಮ್ಮೆ ತಂದ ನಟ ಅರುಣ್ ಸಾಗರ್ ಪುತ್ರ.

ಕಲಾ ನಿರ್ದೇಶಕ, ನಟ ಅರುಣ್‌ ಸಾಗರ್‌ ಪುತ್ರ ಸೂರ್ಯ ದೇಶಕ್ಕೆ ಹೆಮ್ಮ ತರುವಂತ ಕೆಲಸ ಮಾಡಿದ್ದಾರೆ. ಸಾಮಾನ್ಯವಾಗಿ ಕಲಾವಿದರು ಮಕ್ಕಳು ಕಲಾವಿದರಾಗುತ್ತಾರೆ. ಆದರೆ, ಅರುಣ್‌ ಸಾಗರ್‌ ಪುತ್ರ ಸೂರ್ಯ ವಿಭಿನ್ನ ದಾರಿ ಕಂಡುಕೊಂಡಿದ್ದಾರೆ. ವಿದೇಶಿ ಕ್ರೀಡೆ ಮಾಕ್ಸ್‌ ಮೌಥಾಯ್‌ಯಲ್ಲಿ ತರಬೇತಿ ಪಡೆದಿದ್ದು, ಅದರಲ್ಲಿ ಗೆಲುವು ಕಂಡಿದ್ದು ದೇಶಕ್ಕೆ ಹೆಮ್ಮೆ ತಂದಿದ್ದಾನೆ.

 

 

ಥಾಯ್‌ಲಾಂಡ್‌ನ ಪಟಾಯದಲ್ಲಿ ನಡೆದ ಮಾಕ್ಸ್‌ ಮೌಥಾಯ್‌ ಸ್ಪರ್ಧೆಯಲ್ಲಿ 21 ವರ್ಷದ ಸೂರ್ಯ ಮೊದಲ ಬಾರಿಗೆ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಫಸ್ಟ್‌ಟೈಮ್‌ ಭಾರತಕ್ಕೆ ಪ್ರಶಸ್ತಿ ಬಂದಿದ್ದು, ಹೆಮ್ಮೆಯ ತರುವಂಥ ಸಂಗತಿಯಾಗಿದೆ. ಮೈಸೂರಿನ ವಿಕ್ರಮ್‌ ನಾಗರಾಜ್‌ ಬಳಿ ಸತತ ಮೂರು ವರ್ಷಗಳಿಂದ ಮೌಥಾಯ್‌ನಲ್ಲಿ ತರಬೇತಿ ಪಡೆಯುತ್ತಿರುವ ಸೂರ್ಯನಿಗೆ ಒಲಂಪಿಕ್‌ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆಯಿದೆ. ಅದಕ್ಕಾಗಿ ಅವರು ಈಗಿನಿಂದಲೇ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ.

ಭೇಷ್ ಎಂದ ಸುದೀಪ್:
ಸೂರ್ಯ ಸಾಧನೆಗೆ ಸ್ಯಾಂಡಲ್‌ವುಡ್‌ ನಟರಾದ ಸುದೀಪ್‌ ಶುಭ ಹಾರೈಸಿದ್ದಾರೆ. ಈ ಕುರಿತು ಟ್ವಿಟ್‌ ಮಾಡಿರುವ ಸುದೀಪ್‌, ‘ ಮೂರು ವರ್ಷಗಳಿಂದ ತರಬೇತಿ ಪಡೆಯುತ್ತಿದ್ದ ಸೂರ್ಯ, ಕಡಿಮೆ ಸಮಯದಲ್ಲೇ ಅತಿ ದೊಡ್ಡ ಸಾಧನೆ ಮಾಡಿದ್ದಾನೆ. ಅವರಿಂದ ಮತ್ತಷ್ಟು ಸಾಧನೆ ನಿರೀಕ್ಷೆ ಮಾಡುವೆ’ ಎಂದು ಪೋಸ್ಟ್ ಮಾಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top