ಸಮಾಚಾರ

“ಮೋದಿಯನ್ನು ವಿರೋಧಿಸುವವರು, ಬಿಜೆಪಿಗೆ ಮತ ಹಾಕದವರು ತಾಯಿ ಗಂಡರು” ಸಿಟಿ ರವಿ ವಿವಾದಾತ್ಮಕ ಹೇಳಿಕೆ- ವಿಡಿಯೋ ವೈರಲ್

ಇನ್ನೇನು ದಿನದೊಪ್ಪತ್ತಿನಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ.. ಎಲ್ಲಾ ರಾಜಕೀಯ ಪಕ್ಷಗಳು ಅಂತಿಮ ಹಂತದ ಚುನಾವಣಾ ಪ್ರಚಾರದಲ್ಲಿ ಮಗ್ನವಾಗಿದ್ದು ಭೀರುಸಿನ ಪ್ರಚಾರ ನಡೆಸುತ್ತಿವೆ. ಈ ನಡುವೆ ಕೆಲವು ರಾಜಕಾರಣಿಗಳು ಕೀಳು ಮಟ್ಟದ ಹೇಳಿಕೆಯನ್ನು ನೀಡುತ್ತಾ ತಮ್ಮ ಕೀಳು ಮಟ್ಟದ ಮನಸ್ಥಿತಿಯನ್ನು ಹೊರಹಾಕುತ್ತಿದ್ದಾರೆ. ಇದೀಗ ಅಂತಹುದೇ ಅಸಭ್ಯ, ಅಸಹ್ಯ ಹೇಳಿಕೆಯೊಂದನ್ನು ಬಿಜೆಪಿ ಮುಖಂಡ ಮಾಜಿ ಸಚಿವ ಸಿಟಿ ರವಿ ಅವರು ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರವಾಗಿ ಪ್ರಚಾರದಲ್ಲಿ ಪಾಲ್ಗೊಂಡಿದ ಸಿಟಿ ರವಿ ಈ ವೇಳೆ ಮಾತನಾಡಿದ್ದು “ಮೋದಿಯನ್ನು ವಿರೋಧಿಸುವವರು, ಬಿಜೆಪಿಗೆ ಮತಹಾಕದವರು ತಾಯಿಗಂಡರು” ಎಂಬ ಅಸಹ್ಯ ಹೇಳಿಕೆ ನೀಡಿದ್ದಾರೆ.

“ಯಾರಾದರೂ ಜಾತಿ, ಧರ್ಮದ ಕಾರಣಕ್ಕೆ ಮೋದಿ ವಿರೋಧಿಸಿದ್ರೆ ‘ಉಂಡ ಮನೆಗೆ ದ್ರೋಹ ಬಗೆದಂತೆ’ ಅಥವಾ ಹಳ್ಳಿಗಳಲ್ಲಿ ಹೇಳ್ತಾರಲ್ಲಾ ‘ತಾಯಿ ಗಂಡ್ರು’ ಆ ಲೆಕ್ಕ ಬಿಜೆಪಿಗೆ ಮತ ಹಾಕದಿದ್ರೆ ಅದು ತಾಯಿ ಗಂಡರ ಕೆಲಸವಾಗುತ್ತೇ” ಎಂದು ಸಿಟಿ ರವಿ ಹೇಳಿದ್ದಾರೆ.

ಸಿಟಿ ರವಿ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸದ ಜಿಸಿ ಚಂದ್ರ ಶೇಖರ್ ಸೇರಿದಂತೆ ನೆಟ್ಟಿಗರು ಸಿಟಿ ರವಿ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top