fbpx
ಸಮಾಚಾರ

“ಅವನೇ ನನ್ನ ದುಡ್ಡಿನಲ್ಲಿ ಬದುಕುತ್ತಿದ್ದ, ಬೇಕಾದ್ರೆ ಆತನ ಬ್ಯಾಂಕ್ ಅಕೌಂಟ್ ಚೆಕ್ ಮಾಡಿ ಗೊತ್ತಾಗುತ್ತೆ.” ತೇಜಸ್ವಿ ಬಗ್ಗೆ ಡಾ.ಸೋಮ್ ದತ್ತಾ ಮಾತು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧದ ಸ್ಫೋಟಕ ಆಡಿಯೋವೊಂದು ರಿಲೀಸ್ ಆಗಿದ್ದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ತಮ್ಮ ಸುದ್ದಿಗೋಷ್ಠಿ ನಡೆಸಿ ರಿವೀಲ್ ಮಾಡಿದ್ದಾರೆ.. ಕೆಲ ದಿನಗಳ ಹಿಂದೆಯಷ್ಟೇ ತೇಜಸ್ವಿ ಸೂರ್ಯ ವಿರುದ್ಧ ಮೀಟೂ ಆರೋಪ ಮಾಡಿದ್ದ ಡಾ. ಸೋಮ್ ದತ್ತಾ ಅವರು ತಮ್ಮ ಪರಿಚಿತ ವ್ಯಕ್ತಿ ಜೊತೆ ಮಾತನಾಡಿರುವ 14 ನಿಮಿಷಗಳ ಕಾಲ ಆಡಿಯೋ ಕ್ಲಿಪ್ ಈಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.

ಈ ಬಗ್ಗೆ ಸಂಪೂರ್ಣ ಮಾಹಿತಿ ಸಂಸದ ಪ್ರತಾಪ್ ಸಿಂಹ್ ಅವರಿಗೂ ಗೊತ್ತಿದೆ. ಆದರೂ ಕೂಡ ಟಿಕೆಟ್ ಕೊಡಿಸಿದ್ದಾರೆ. ಈ ವಿಚಾರ ಗೊತ್ತಿತ್ತಾದರೂ ಯಾಕೆ ಕ್ರಮ ಕೈಗೊಳ್ಳಲಿಲ್ಲ..?ತೇಜಸ್ವಿ ಸೂರ್ಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತೇಜಸ್ವಿ ಸೂರ್ಯ ತಮ್ಮ ಅಫಿಡವಿಟ್ ನಲ್ಲಿ ಪ್ರಕರಣ ಬಗ್ಗೆ ಹೇಳಿಕೊಂಡಿಲ್ಲ ಎಂದು ಬ್ರಿಜೇಶ್ ಕಾಳಪ್ಪಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಡಿಯೋ ಇಲ್ಲಿ ಕೇಳಿ

ಹಾಗಾದರೆ ಕಾಂಗ್ರೆಸ್ ಬಿಡುಗಡೆ ಮಾಡಿದ ಆಡಿಯೋದಲ್ಲಿನ ಸಂಭಾಷಣೆ ಏನು?
” ಮೊದಲಿನಿಂದಲೂ ಆ ಪಕ್ಷದಲ್ಲಿ ನಾನು ಕೆಲಸ ಮಾಡಿದ್ದೇನೆ. ನಮ್ಮಿಬ್ಬರ ವಿಷಯ ಪಕ್ಷದ ಹಲವು ಮುಖಂಡರು ಸೇರಿದಂತೆ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೂ ಗೊತ್ತಿದೆ. ಎಂಪಿ ಟಿಕೆಟ್ ಸಿಕ್ಕಿದ ನಂತರ ಅವನು ಹೆಚ್ಚು ಜನಪ್ರಿಯನಾಗಿದ್ದು ಸಮಾಜದಲ್ಲಿ ಅವನಿಗಿಂತ ಹೆಚ್ಚು ಗೌರವವನ್ನು ನಾನು ಹೊಂದಿದ್ದೇನೆ. ನಾನೇಕೆ ನನ್ನ ಗೌರವವನ್ನು ಹಾಳು ಮಾಡಿಕೊಳ್ಳಲಿ. ಶಾಸಕರೊಬ್ಬರು ಕರೆ ಮಾಡಿ ನನ್ನ ಬಳಿ ಎಲ್ಲ ದಾಖಲೆಗಳಿವೆ, ಕೋರಮಂಗಲದಲ್ಲಿ ನಾನು ದೂರು ದಾಖಲಿಸಿರುವ ಎಫ್‍ಐಆರ್, ವಾಟ್ಸಪ್ ಮೆಸೇಜ್ ಗಳಿವೆ ಎಂದು ಹೇಳಿದರು. ಶಾಸಕರೊಂದಿಗೆ ಇನ್ನಿಬ್ಬರು ಹುಡುಗಿಯರು ಸಹ ಮಾತನಾಡಿದ್ದಾರೆ. ಫೋನಿನಲ್ಲಿ ಇಬ್ಬರು ಹುಡುಗಿಯರ ಹೆಸರು ಹೇಳಲಾರೆ. ಒಬ್ಬ ಹುಡುಗಿ ಮ್ಯಾಗಜೀನ್ ನಲ್ಲಿ ಕೆಲಸ ಮಾಡಿದ್ದಳು. ಇದೀಗ ಆಕೆ ಮದುವೆಯಾಗಿ ಮುಂಬೈನಲ್ಲಿ ವಾಸಿಸುತ್ತಿದ್ದಾಳೆ..

ಅವನು ನನ್ನ ದುಡ್ಡಿನಲ್ಲಿ ಬದುಕುತಿದ್ದ:
ಆತ ಇಷ್ಟು ದಿನ ನನ್ನ ಹಣದಿಂದಲೇ ಜೀವನ ಸಾಗಿಸುತ್ತಿದ್ದ ಬೇಕಿದ್ರೆ ಆತನ ಬ್ಯಾಂಕ್ ಅಕೌಂಟ್ ಚೆಕ್ ಮಾಡಿ. ನನ್ನಿಂದ ಎಷ್ಟು ಹಣ ಪಡೆದಿದ್ದಾನೆ ಎಂಬುದು ಗೊತ್ತಾಗಲಿದೆ.. ಕೆಲವರು ಹಣಕ್ಕಾಗಿ ನಾನು ಬ್ಲ್ಯಾಕ್ ಮೇಲ್ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ.. ನಾನು ಎಷ್ಟು ಶ್ರೀಮಂತಳು ಎಂಬುವುದು ಎಲ್ಲರಿಗೂ ಗೊತ್ತಿದೆ. ನನ್ನ ಕಂಪನಿಗಳು ಮುನ್ನೂರು ಮಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿವೆ. ನಾನೇಕೆ ದುಡ್ಡಿಗಾಗಿ ಬೇರೆಯವರನ್ನ ಬ್ಲ್ಯಾಕ್ ಮೇಲ್ ಮಾಡಬೇಕು. ಅವನೇ ನನ್ನ ಹಣದಿಂದ ಬದುಕುತ್ತಿದ್ದ, ನಾನು ಏಕೆ ಅವನಿಗೆ ಬ್ಲ್ಯಾಕ್ ಮೇಲ್ ಮಾಡಲಿ. ಬ್ಲ್ಯಾಕ್ ಮೇಲ್ ಮಾಡುವದರಿಂದ ಏನು ಉಪಯೋಗವಾಗಲಿದೆ. ನನಗೇನು ಅದರಿಂದ ಖ್ಯಾತಿ ಬರುತ್ತಾ?

ಟ್ವೀಟ್ ಡಿಲೀಟ್ ಮಾಡಿದ್ಯಾಕೆ?
ಕಳೆದ ವರ್ಷ ಜೂನ್ / ಜುಲೈ ತಿಂಗಳಲ್ಲಿ ನಾನು ದೂರು ದಾಖಲಿಸಿದ್ದೆ ದೀಪಾವಳಿ ಹಬ್ಬದಂದು ನನ್ನ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾಗ ಪೊಲೀಸರು ಬಂದು ಆತನನ್ನು ಕರೆದುಕೊಂಡು ಹೋಗಿದ್ದರು. ಮಾರ್ಚ್ 12ನವರೆಗೂ ಆತ ನನ್ನ ಜೊತೆ ಸಂಪರ್ಕದಲ್ಲಿದ್ದ. ನಾನು ಮಹಿಳಾ ಸಬಲೀಕರಣದ ಬಗ್ಗೆ ನಟನಾಡುತ್ತೇನೆ ಹಾಗಾಗಿ ನನ್ನ ನೋವನ್ನು ಹೇಳಿಕೊಂಡಿದ್ದೆ. ಆದರೆ ಟ್ವೀಟ್ ಮಾಡಿದ ನಂತರ ನನ್ನ ಕುಟುಂಬದವರಿಗೆ ಅನಗತ್ಯವಾಗಿ ತೊಂದರೆ ಕೊಡುವುದು ಆರಂಭವಾಯಿತು. ನನ್ನ ಕುಟುಂಬದವರ ರಕ್ಷಣೆಗಾಗಿ ಟ್ವೀಟ್ ಡಿಲೀಟ್ ಮಾಡಿದೆ.

ಆತನ ವಿರುದ್ಧ ಟ್ವೀಟ್ ಮಾಡಿ ಪ್ರಸಿದ್ಧಿ ಪಡೆಯಬೇಕೆಂಬ ಕೆಟ್ಟ ಆಸೆ ನನಗಿಲ್ಲ. ನಾನು ಈಗಾಗಲೇ ತುಂಬಾ ಹೆಸರು ಮಾಡಿದ್ದೇನೆ. ಎಂಪಿ ಟಿಕೆಟ್ ಸಿಕ್ಕ ಬಳಿಕ ಆತ ನಾಲ್ಕು ಜನರಿಗೆ ಗೊತ್ತಾಗಿದ್ದಾನೆ. ಇ-ಮೇಲ್ ಮೂಲಕ ಸಹ ಆತ ನನಗೆ ಬೆದರಿಕೆ ಹಾಕುತ್ತಿದ್ದ. ಮೇಲ್ ನಲ್ಲಿಯೂ ನನಗೆ ತೊಂದರೆ ನೀಡಿರುವುದನ್ನು ಎಲ್ಲವನ್ನು ಒಪ್ಪಿಕೊಂಡಿದ್ದಾನೆ. ನಾನು ಇದೆಲ್ಲದರಿಂದ ಹೊರಬರಬೇಕಿತ್ತು. ನಾನು ಅವನನ್ನು ಬಹು ಹಿಂದೆಯೇ ತಡೆಯಬೇಕಿತ್ತು. ಒಬ್ಬ ಕೆಟ್ಟ ಮನುಷ್ಯನಿಂದಾಗಿ ನನ್ನ ಕುಟುಂಬವು ಸಹ ತುಂಬಾ ಗೌರವಸ್ಥ ಕುಟುಂಬ. ಇಂದಿಗೂ ನಾನು ಅವನ ಕುಟುಂಬಸ್ಥರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೇನೆ.

ಪ್ರತಾಪ್ ಸಿಂಹಗೆ ಕೂಡ ಗೊತ್ತಿತ್ತು:
ಹೆಚ್ಚಿನ ಮಾಹಿತಿ ಬೇಕಾದ್ರೆ ಐಪಿಎಸ್ ಮಹಿಳಾ ಅಧಿಕಾರಿಯೊಬ್ಬರನ್ನು ಭೇಟಿ ಮಾಡಿ. ಅವರೊಂದಿಗೆ ಮಾತನಾಡಿ ಈ ವ್ಯಕ್ತಿಯ ಬಗ್ಗೆ ದೂರು ನೀಡಿದ್ದೇನೆ. ಈ ವಿಷಯ ಸಂಸದ ಪ್ರತಾಪ್ ಸಿಂಹರಿಗೂ ಗೊತ್ತಿದೆ. ಪ್ರತಾಪ್ ಸಿಂಹರಿಗೆ ನಮ್ಮಿಬ್ಬರ ಮಾತುಕತೆ ಸ್ಕ್ರೀನ್ ಶಾಟ್ ಕಳುಹಿಸಿದ್ದೇನೆ.

ನಾನು ಅವನ ಗರ್ಲ್ ಫ್ರೆಂಡ್ ಅಲ್ಲ, ಭಾವಿಪತ್ನಿಯಾಗಿದ್ದವಳು:
ನಾನು ಅವನ ಗರ್ಲ್ ಫ್ರೆಂಡ್ ಅಲ್ಲ, ಭಾವಿಪತ್ನಿಯಾಗಿದ್ದವಳು. ನಮ್ಮಿಬ್ಬರ ನಿಶ್ಚಿತಾರ್ಥ ಕೂಡ ನಡೆದಿತ್ತು. ನಾವಿಬ್ಬರು ಮದುವೆ ಆಗಲಿದ್ದೇವೆ ಎಂದು ಇಡೀ ಜಗತ್ತಿಗೆ ಗೊತ್ತಿತ್ತು. ನಿಶ್ಚಿತಾರ್ಥದ ಬಳಿಕ ನಾವು ಒಟ್ಟಾಗಿ ಓಡಾಡುತ್ತಿದ್ದೆವು.. ಈ ಘಟನೆಗಳನ್ನು ಸುಳ್ಳು ಎಂದು ಹೇಳಲು ಹೇಗೆ ಸಾಧ್ಯ? ನಾವು ಜೊತೆಯಾಗಿ ಒಡಾಡುತ್ತಿದ್ದ ವಿಚಾರ ಎಲ್ಲರಿಗೂ ಗೊತ್ತಿತ್ತು. ನಾನು ಅದರಿಂದ ಹೊರ ನಡೆದೆ ಅಷ್ಟೇ.

ಆತ ಎಂಪಿ ಆದ್ರೆ ‘ಹಿ ಈಸ್ ಡೇಂಜರಸ್’:
ಆತ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿರೋದು ಗೊತ್ತಿತ್ತು. ತೊಂದರೆ ಕೊಡುವುದಿದ್ದರೆ ಆಗಲೇ ಕೊಡುತ್ತಿದ್ದೆ.. ಸಂತೋಷ್ ಜೀ ಮತ್ತು ಮುಕುಂದ್ ಜೀ ಸಹಾಯದಿಂದ ಆತ ಟಿಕೆಟ್ ಪಡೆದುಕೊಂಡಿದ್ದಾನೆ. ನಾನು ಪ್ರಧಾನಿ ನರೇಂದ್ರ ಮೋದಿ ಸಲಹೆಗಾರರ ಮಾನಸ ಪುತ್ರಿ. ತೇಜಸ್ವಿನಿ ಅನಂತ್ ಕುಮಾರ್ ಅವರೊಂದಿಗೆ ಮಾತನಾಡಿದ್ದಾರೆ. ಆಕೆಯೇ ಅವನಿಂದ ಮೊದಲು ದೌರ್ಜನ್ಯಕ್ಕೆ ತುತ್ತಾದವಳು. ಮುಂಬೈನಲ್ಲಿ ಐಶ್ವರ್ಯ ಎಂಬವರ ಬಗ್ಗೆ ಕೇಳಿದ್ದೇನೆ. ಒಂದು ವೇಳೆ ಆತ ಎಂಪಿ ಆದ್ರೆ ‘ಹಿ ಈಸ್ ಡೇಂಜರಸ್’…

ಈ ರೀತಿಯಾಗಿ ಸೋಮ್ ದತ್ತಾ ಅವರು ಆಡಿಯೋದಲ್ಲಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top