fbpx
ಮನೋರಂಜನೆ

ಅಪ್ಪ ಆದ ಖುಷಿಯಲ್ಲಿ ‘ಬಿಗ್ ಬಾಸ್’ ಖ್ಯಾತಿಯ ರಿಯಾಝ್ ಬಾಷಾ.

ಬಿಗ್ ಬಾಸ್ ಕನ್ನಡ ಸೀಸನ್ 5ರ ಸ್ಪರ್ದಿಯಾಗಿ ಖ್ಯಾತಿ ಗಳಿಸಿದ್ದ ರಿಯಾಜ್ ಭಾಷಾ ಈಗ ಅಪ್ಪ ಆಗಿದ್ದಾರೆ. ನಿನ್ನೆ ರಿಯಾಝ್ ಪತ್ನಿ ಆಯೆಷಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿ ಇದ್ದಾರೆ.

ತಾವು ತಂದೆಯಾದ ಶುಭ ಸಮಾಚಾರವನ್ನು ತಮ್ಮ ಫೇಸ್ ಬುಕ್ ಖಾತೆಯ ಮೂಲಕ ತಿಳಿಸಿರುವ ರಿಯಾಜ್ “ಸಿಹಿ ಸುದ್ದಿ ತಂದೆ.. ನಾನು ತಂದೆ ಮತ್ತು ಆಯೆಷಾ ತಾಯಿಯಾದೆವು.. ನಿಮ್ಮ ಆಶೀರ್ವಾದ ಸದಾ ನಮ್ಮೊಂದಿಗಿರಲಿ.. 🙂

Life has come a full circle. We’ve been blessed with Parenthood with the arrival of a baby boy by the grace of the Lord Almighty. TIA to your wishes – God bless, ” ಎಂಬ ಸಾಲುಗಳ ಮೂಲಕ ತಮ್ಮ ಖುಷಿಯನ್ನು ರಿಯಾಜ್ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಜೊತೆಗೆ ತಮ್ಮ ಮದ್ದು ಕಂದನ ಮೊದಲ ಫೋಟೋವನ್ನು ಕೂಡ ಅಪ್ಲೋಡ್ ಮಾಡಿದ್ದಾರೆ.

 

 

ರಿಯಾಜ್ ಅವರು ವೃತ್ತಿಯಲ್ಲಿ ರೇಡಿಯೋ ಜಾಕಿ ಹಾಗೂ ನಿರೂಪಕರಾಗಿ ಕೆಲಸ ಮಾಡುತ್ತಿದ್ದರು. ಬಾಲಿವುಡ್ ತಾರೆಯರ ಅನೇಕ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ರಿಯಾಜ್ ನಿರೂಪಣೆಯ ಮಾಡಿದ್ದಾರೆ.. ಬಿಗ್ ಬಾಸ್ ಮೂಲಕ ಮನೆ ಮಾತಾಗಿದ್ದ ರಿಯಾಜ್ ಆ ನಂತರವೂ ಒಂದೆರಡು ಕಿರುತೆರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top