fbpx
ಮನೋರಂಜನೆ

ಇದೇ ಮೊದಲ ಬಾರಿಗೆ ಸಿನಿಮಾಗಾಗಿ ಚಂದನವನದ ಬೆಳ್ಳಿತೆರೆಯ ಮೇಲೆ ಒಟ್ಟಾಗಿ ಅಭಿನಯಿಸುತ್ತಿದ್ದಾರೆ ಮೂವರು ಸಹೋದರರು – ಹಾಗಾದರೆ ಅದು ಯಾವ ಸಿನಿಮಾ ಗೊತ್ತಾ?

ಡೈಲಾಗ್ ಕಿಂಗ್ ಸಾಯಿ ಕುಮಾರ್, ಆರ್ಮುಗಂ ಖ್ಯಾತಿಯ ರವಿ ಶಂಕರ್ ಹಾಗೂ ಡೈರೆಕ್ಟರ್ ಕಮ್ ಆ್ಯಕ್ಟರ್ ಅಯ್ಯಪ್ಪ ಪಿ ಶರ್ಮ ಈ ಮೂವರು ಸಹೋದರರು ಚಂದನವನದ ಬೆಳ್ಳಿತೆರೆಯ ಮೇಲೆ ಒಟ್ಟಾಗಿ ಅಭಿನಯಿಸುತ್ತಿದ್ದಾರೆ. ಹೌದು, ಈ ಮೂವರು ಸಹೋದರರು ಒಂದೇ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ.

ಅಂದಹಾಗೆ ಈ ಮೂವರು ಸಹೋದರರು ನಟಿಸುತ್ತಿರುವ ಆ ಸಿನಿಮಾ ಯಾವುದು ಎಂದು ತಿಳಿಯೋ ಕುತೂಹಲ ನಿಮ್ಮಲಿದೆಯೇ ? ಹಾಗಾದರೆ ಇಲ್ಲಿದೆ ನೋಡಿ ಅದಕ್ಕೆ ಉತ್ತರ….

 

 

ಬಹದ್ದೂರ್ ಸಿನಿಮಾದ ನಿರ್ದೇಶಕ ಚೇತನ್ ರವರು ಆಕ್ಷನ್ ಕಟ್ ಹೇಳುತ್ತಿರುವ ಹಾಗೂ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅಭಿನಯಿಸುತ್ತಿರುವ ‘ಭರಾಟೆ’ ಸಿನಿಮಾದಲ್ಲಿ ಈ ಮೂವರು ಸಹೋದರರು ಕಾಣಿಸಿಕೊಳ್ಳುತ್ತಿದ್ದಾರೆ ಅನ್ನುವ ಸುದ್ದಿ ಈಗಾಗಲೇ ಗಾಂಧಿನಗರದಲ್ಲಿ ಧೂಳೆಬ್ಬಿಸುತಿದ್ದು. ಈಗಾಗಲೇ ರವಿ ಶಂಕರ್ ಹಾಗೂ ಅಯ್ಯಪ್ಪ ರವರ ಶೂಟಿಂಗ್ ಸಂಪೂರ್ಣಗೊಂಡಿದೆಯಂತೆ. ಆದರೆ ಇನ್ನೂ ನಟ ಸಾಯಿ ಕುಮಾರ್ ಪಾತ್ರದ ಸಿನಿಮಾ ಚಿತ್ರೀಕರಣ ನಡೆಯಬೇಕಿದೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಈ ಸಿನಿಮಾದ ಬಗ್ಗೆ ಸಿನಿ ಪ್ರೇಮಿಗಳಿಗೆ ಭಾರಿ ಕುತೂಹಲವಿದ್ದು , ಚಿತ್ರದ ಟ್ರೈಲರ್ ಮತ್ತು ಡೈಲಾಗ್ ಗಳಿಗೆ ಸಿನಿರಸಿಕರು ಬೆರಗಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top