fbpx
ಸಮಾಚಾರ

ಕಾಯಿಲೆ ನೆಪವೊಡ್ಡಿ ಅಂಬಿ ಅಂತಿಮ ದರ್ಶನಕ್ಕೆ ಗೈರಾಗಿದ್ದ ರಮ್ಯಾ ದುಬೈನಲ್ಲಿ ಪ್ರತ್ಯಕ್ಷ-ನೆಟ್ಟಿಗರ ತರಾಟೆ.

ಅಂಬರೀಷ್ ನಿಧನದ ವೇಳೆ ಅಂತಿಮ ದರ್ಶನಕ್ಕೆ ಬಾರದೇ ಮಂಡ್ಯ ಜನತೆಯ ಆಕ್ರೋಶಕ್ಕೆ ಗುರಿಯಾಗಿದ್ದ ಮಾಜಿ ಸಂಸದೆ ನಟಿ ರಮ್ಯಾ ತನಗೆ ಕಾಲಿನ ಮೂಳೆ ಕ್ಯಾನ್ಸರ್ ಇದೆ ಆ ಕಾರಣಕ್ಕಾಗಿ ಬರಲು ಸಾಧ್ಯವಾಗಲಿಲ್ಲ ಎಂಬ ನೆಪವೊಡ್ಡಿದ್ದರು. ತನಗೆ ಮೂಳೆ ಸಂಬಂಧಿತವಾದ ಆಸ್ಟಿಯೋಕ್ಲ್ಯಾಟೋಮ ಎಂಬ ಕಾಯಿಲೆ ಇದೆ. ಇದು ಮೂಳೆ ಸಂಬಂಧಿತ ರೋಗ. ಕೊಂಚ ಯಾಮಾರಿದ್ರೆ ಕ್ಯಾನ್ಸರ್ ಕಾಯಿಲೆ ಬಂದು ಬಿಡುತ್ತಿತ್ತು ಅಂತೆಲ್ಲ ರಮ್ಯಾ ಹೇಳಿದ್ದರು..

ಇಂಥಾ ರಮ್ಯಾ ಇದೀಗ ದುಬೈನಲ್ಲಿ ಪ್ರತ್ಯಕ್ಷವಾಗುವ ಮೂಲಕ ತನ್ನ ಕಾಯಿಲೆ ವಾಸಿಯಾಗಿದೆ ಎಂದು ತೋರಿಸಿದ್ದಾಳೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎರಡು ದಿನಗಳ ಕಾರ್ಯಕ್ರಮದ ನಿಮಿತ್ತ ದುಬೈಗೆ ಭೇಟಿ ನೀಡಿದ್ದಾರೆ. ಹೀಗಾಗಿ ಒಂದು ದಿನ ಮೊದಲೇ ದುಬೈಗೆ ಬಂದಿರುವ ರಮ್ಯಾ, ರಾಹುಲ್ ಗಾಂಧಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಂಡಿದ್ದಾರೆ. ಕೆಲ ಹೊತ್ತು ದುಬೈನ ಬೀಚ್‍ನಲ್ಲಿ ತಿರುಗಾಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ನಟಿ ರಮ್ಯಾ ದುಬೈನಲ್ಲಿರುವ ಫೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂಬಿ ಅಂತ್ಯಕ್ರಿಯೆಗೆ ಬಾರದೆ ಕುಂಟು ನೆಪವೊಡ್ಡಿ ರಮ್ಯಾ ವಿದೇಶದಲ್ಲಿ ಮಜಾ ಮಾಡುತ್ತಿದ್ದಾರೆ. ಒಂದು ತಿಂಗಳಿನಲ್ಲೇ ಮಾರಕ ಕಾಯಿಲೆ ಗುಣಮುಖವಾಗಿದೆಯೇ ಎಂದೆಲ್ಲ ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಅಂಬರೀಶ್ ಅಂತಿಮ ದರ್ಶನ ಮಾಡದ ರಮ್ಯಾಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಇದಾದ ನಂತರ ರಮ್ಯಾ ರಾತ್ರೋರಾತ್ರಿ ಮಂಡ್ಯದ ಮನೆ ಕಾಲಿ ಮಾಡಿದ್ದರು. ಅಂದು ಅನಾರೋಗ್ಯದ ಕಾರಣ ನೀಡಿದ್ದ ರಮ್ಯಾ ತಮ್ಮ ಕಾಲಿನ ಗಾಯದ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top