fbpx
ಸಮಾಚಾರ

ಮಾಧ್ಯಮದವರನ್ನು ಬೆಂಡೆತ್ತಿದ ರಾಕಿಂಗ್ ಸ್ಟಾರ್ ಯಶ್ ರನ್ನು ಹಾಡಿ ಹೊಗಳಿದ ಸಂಸದ ಪ್ರತಾಪ್ ಸಿಂಹ – ಅಷ್ಟಕ್ಕೂ ಯಶ್ ಬಗ್ಗೆ ಪ್ರತಾಪ್ ಸಿಂಹ ಹೇಳಿದ್ದೇನು ಗೊತ್ತೇ ?

ಜನವರಿ 3 ರಂದು ರಾಕಿಂಗ್ ಸ್ಟಾರ್ ಯಶ್ ಮನೆಯ ಮೇಲೆ ನಡೆದಿದ್ದ ಐಟಿ ದಾಳಿಗೆ ಸಂಬಂಧಿಸಿದಂತೆ ನಿನ್ನೆ ಯಶ್ ರವರನ್ನು ಆದಾಯ ತೆರಿಗೆ ಇಲಾಖೆ ನಿನ್ನೆ ವಿಚಾರಣೆಗೆ ಕರೆದಿತ್ತು. ಅದರಂತೆ ಐಟಿ ವಿಚಾರಣೆಗೆ ಹಾಜರಾದ ಯಶ್ , ಐಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿ ಅಥವಾ ವಿವರಣೆ ನೀಡಿ ನಂತರ ಐಟಿ ಕಚೇರಿಯಿಂದ ಹೊರಬಂದು ಮಾಧ್ಯಮದ ಪ್ರಶ್ನೆಗೆ ಉತ್ತರ ನೀಡಿದರು.

“ನನಗೆ ಮೊದಲು ಅಧಿಕಾರಿಗಳು 8 ಅಥವಾ 9 ನೇ ತಾರೀಖಿನಂದು ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದರು. ಆದರೆ , ನನ್ನ ಹುಟ್ಟಿದ ಹಬ್ಬದ ನಿಮಿತ್ತ ನನಗೆ ಆ ದಿನಾಂಕದಂದು ಬರುವುದು ಕಷ್ಟವಾಗಬಹುದೆಂದು ಊಹಿಸಿದ ನಾನು, 10ನೇ ತಾರೀಖಿನಂದು ಬರಬಹುದಾ? ಎಂದು ವಿನಂತಿಸಿಕೊಂಡಿದ್ದೆ. ಹಾಗಾಗಿ ಅವರು 11ನೇ ತಾರೀಖೀನಂದು ಬರುವಂತೆ ಸೂಚನೆ ನೀಡಿದರು” ಎಂದು ಯಶ್ ಹೇಳಿದರು.

ಮುಂದುವರೆದು ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ , “ಕೆಲವು ಮಾಧ್ಯಮಗಳಲ್ಲಿ ನನಗೆ 40ಕೋಟಿ ಲೋನ್ ಇದೆ ಅನ್ನೋ ಸುದ್ದಿ ಹರಿದಾಡುತ್ತಿದೆ, ಆದರೆ ನನಗೆ ಅಷ್ಟು ಹಣದ ಅವಶ್ಯಕತೆ ಏಕಿರುತ್ತದೆ ? ನಾನೇಕೆ ಅಷ್ಟು ಸಾಲ ಪಡೆಯಲಿ? ಅಲ್ಲದೇ, ನನಗೆ ಹೆಚ್ಚೆಂದರೆ 16 ರಿಂದ 17 ಕೋಟಿ ರೂಪಾಯಿಗಳಷ್ಟು ಸಾಲವಿದೆ. ಅಲ್ಲಾ, ನೀವೇ ಹೇಳಿ ‘ ನಾನು ಸರಿಯಾಗಿ ಆದಾಯ ತೆರಿಗೆ ಪಾವತಿಸದೇ ಇದ್ದಿದ್ದರೆ ನನಗೆ ಇಷ್ಟು ಲೋನ್ ಅನ್ನು ಬ್ಯಾಂಕ್ ನವರು ನೀಡುತ್ತಿದ್ದರ? ನಿಮ್ಮ ಇನ್ಕಮ್ ಹಾಗೂ ಅದಕ್ಕೆ ಸಂಬಂಧಿಸಿದಂತೆ ನೀವು ತೆರಿಗೆ ಕಟ್ಟದೇ ಇದ್ದರೆ ಯಾವ ಬ್ಯಾಂಕಿನವರು ನಿಮಗೆ ಸಾಲ ನೀಡುತ್ತಾರೆ? ಎಂದು ಮರುಪ್ರಶ್ನಿಸುವುದರ ಮೂಲಕ ಯಶ್ ಮಾಧ್ಯಮದವರನ್ನು ತರಾಟೆಗೆ ತೆಗೆದುಕೊಂಡರು.

ಅಷ್ಟೇ ಅಲ್ಲದೆ, ತಮ್ಮ ವಿರುದ್ಧ ತಿರುಗಿ ಬಿದ್ದಿರುವ ಒಂದು ಮಾಧ್ಯಮದ ವಿರುದ್ಧ ಅಸಮಧಾನ ಹೊರ ಹಾಕಿದ ಯಶ್ , ನಿಮಗೆ ಏಕೆ ಎಲ್ಲವನ್ನೂ ತಿಳಿಸಬೇಕು? ಇದು ಆದಾಯ ತೆರಿಗೆ ಮತ್ತು ನಮ್ಮ ನಡುವಿನ ವಿಷಯ ನಮಗೆ ಅವರು ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಅದನ್ನು ನಾವು ಪಾಲಿಸುತ್ತೇವೆ. ಅದನ್ನು ಬಿಟ್ಟು ನಿಮಗೆ ಬಂದಂತೆ ತೋರಿಸಿದರೆ ಅದಕ್ಕೆ ನಾನೂ ಕೇರ್ ಮಾಡಲ್ಲ ಎಂದು ಮಾಧ್ಯಮಗಳ ವಿರುದ್ಧ ಯಶ್ ಗರಂ ಆದರೂ. ಒಟ್ಟಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಹೇಳಿಕೆಗಳ ಕೇಳಿ ಖುಷ್ ಆದ ಅಭಿಮಾನಿಗಳು ಜೈ ಎಂದರು.

ವಿಶೇಷವಾಗಿ ಇದೀಗ ಇದರ ಬೆನ್ನಲ್ಲೇ ಯಶ್ ರವರ ನೇರ ನುಡಿ ಮತ್ತು ನಡವಳಿಕೆಯನ್ನು ಮೆಚ್ಚಿದ ಭಾರತೀಯ ಜನತಾ ಪಕ್ಷದ ಸಂಸದ ಪ್ರತಾಪ್ ಸಿಂಹ ಅವರು ಯಶ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡು “ಅಂಬರೀಷಣ್ಣನ ನಂತರ ಯಾರಿಗೂ ಕ್ಯಾರೇ ಅನ್ನದೆ ಅನಿಸಿದ್ದನ್ನು ಹೇಳಿ ಮಾಧ್ಯಮಗಳಿಗೂ ಮಂಗಳಾರತಿ ಮಾಡುವ ಏಕಮಾತ್ರ ವ್ಯಕ್ತಿ ಯಶ್” ಎಂದು ಯಶ್ ರವರನ್ನು ಹಾಡಿ ಹೊಗಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top