fbpx
ಸಮಾಚಾರ

ಪಾಕಿಸ್ತಾನದಲ್ಲಿ ಆಯ್ತು ಈಗ ಚೀನಾದಲ್ಲೂ ಕೆಜಿಎಫ್ ಹವಾ!

ಪ್ರಶಾಂತ್ ನೀಲ್ ನಿರ್ದೇಶನದ , ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕನ್ನಡದ ಹೆಮ್ಮೆಯ ಕೆಜಿಎಫ್ ಸಿನಿಮಾ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸುತ್ತಿರುವ ವಿಷಯ ನಮ್ಮೆಲ್ಲರಿಗೂ ಗೊತ್ತೇ ಇದೆ, ಗೊತ್ತಾಗುತ್ತಲೂ ಇದೆ. 100 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೆಜಿಎಫ್ ಸಿನಿಮಾ ಜ.10ರಂದು ಪಾಕಿಸ್ತಾನದ ಲಾಹೋರ್‌, ರಾವಲ್ಪಂಡಿ, ಮುಲ್ತಾನ್‌ ನಗರಗಳಲ್ಲಿ ಚಿತ್ರ ರಿಲೀಸ್‌ ಆಗಿದ್ದು,ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ

ಹೌದು,ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್​ ಸಿನಿಮಾ, ಈಗ ಪಾಕಿಸ್ತಾನದಲ್ಲೂ ಧೂಳೆಬ್ಬಿಸುತಿದೆ. ಅಂದಹಾಗೆ ಯಶ್ ನಟನೆಯ ಬಗ್ಗೆ ಮತ್ತು ಸಿನಿಮಾ ಮೇಕಿಂಗ್ ಬಗ್ಗೆ
ಪಾಕಿಸ್ತಾನದಲ್ಲಿ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, “‘ಭಾರತೀಯ ಸಿನಿಮಾ ರಂಗದ ಉತ್ತಮ ಸಿನಿಮಾಗಳಲ್ಲಿ ಇದು ಕೂಡ ಒಂದು. ನಾಯಕ ಯಶ್‌ ಕ್ಲಾಸಿಕ್‌ ಆಗಿ ನಟಿಸಿದ್ದು, ನಾವು ಚಾಪ್ಟರ್‌ 2ಗಾಗಿ ಕಾಯುತ್ತಿದ್ದೇವೆ’ ಎಂಬ ಅಭಿಪ್ರಾಯವನ್ನು ಪ್ರೇಕ್ಷಕರು ವ್ಯಕ್ತಪಡಿಸಿದ್ದಾರಂತೆ.

ಹಾಗಾಗಿ ಪಾಕಿಸ್ತಾನದಲ್ಲಿ ಈ ಸಿನಿಮಾ ಬಿಡುಗಡೆ ಆಗಿರುವ ಕುರಿತು ಮಾತನಾಡಿರುವ ನಿರ್ಮಾಪಕರು, ‘ಮುಂದಿನ ದಿನಗಳಲ್ಲಿ ಈ ಚಿತ್ರವನ್ನು ನಾವು ಚೀನಾದಲ್ಲಿಯೂ ಬಿಡುಗಡೆ ಮಾಡಲು ಪ್ಲಾನ್‌ ಮಾಡಿದ್ದೇವೆ’ ಎಂದಿದ್ದಾರೆ.

ಒಟ್ಟಿನಲ್ಲಿ ಬಾಲಿವುಡ್ ಸಿನಿಮಾಗಳ ಆರ್ಭಟವೇ ಪಾಕಿಸ್ತಾನದಲ್ಲಿ ಹೆಚ್ಚಿರುವಾಗ ಇದರ ನಡುವಲ್ಲಿ ಕನ್ನಡ ಸಿನಿಮವೊಂದು ಪಾಕ್ ನಲ್ಲಿ ತೆರೆಕಂಡು ಸೈ ಎನಿಸಿಕೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವೇ ಸರಿ . ಒಂದುವೇಳೆ ಅಂದುಕೊಂಡಂತೆ ಚೀನಾದಲ್ಲೂ ಕೆಜಿಎಫ್ ರಿಲೀಸ್ ಆದರೆ ಕನ್ನಡಿಗರ ಖುಷಿಗೆ ಮಿತಿಯೇ ಇಲ್ಲದಂತಾಗುತ್ತದೆ ಅಲ್ಲವೇ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top